ಕೋವಿಡ್ ಸಮಯದಲ್ಲಿಯೂ AIKMCC ಯ ಸಾಧನೆ ಶ್ಲಾಘನೀಯ – ಟಿ.ಎಂ. ಶಹೀದ್ ತೆಕ್ಕಿಲ್…

ಬೆಂಗಳೂರು: ಆಲ್ ಇಂಡಿಯ ಕೆ ಎಂ ಸಿ ಸಿ ಬೆಂಗಳೂರು ವತಿಯಿಂದ ಸತತ 3 ನೇ ವರ್ಷದ 100 ಜೋಡಿಗಳ ಸಾಮೂಹಿಕ ವಿವಾಹವು ಶಿಹಾಬ್ ತಂಙಳ ಸೆಂಟರ್ ಫಾರ್ ಹ್ಯುಮಾನಿಟಿ ಆಡಿಟೊರಿಯಮ್ ಸೋಮೇಶ್ವರ ನಗರ ಬೆಂಗಳೂರಿನಲ್ಲಿ ನಡೆಯಿತು.
ಕೋವಿಡ್ ಹಿನ್ನಲೆಯಲ್ಲಿ 10 ದಿನಗಳ ಕಾಲ 100 ಜೋಡಿಗಳ ವಿವಾಹ ನಡೆಯಿತು. 100 ಜೋಡಿಗಳಲ್ಲಿ 10 ಹಿಂದು ಸಹೋದರರು 90 ಮುಸ್ಲಿಂ ಜೋಡಿಗಳಿದ್ದರು.
ಆ. 28 ರಂದು ರಂದು 7 ನೇ ದಿವಸದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕೆಪಿಸಿಸಿಯ ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ ಭಾಗವಹಿಸಿ ಸುಮಾರು 10 ವರ್ಷದಿಂದ ಕಾರ್ಯಚರಿಸುತ್ತಿರುವ ಈ ಸಂಸ್ಥೆಯು ಬೆಂಗಳೂರು ನಗರದಲ್ಲಿ 8000 ಕ್ಕಿಂತ ಅಧಿಕ ಸ್ವಯಂ ಸೇವಕರನ್ನು ಹೊಂದಿದ್ದು, ಸುಮಾರು 2 ಕೋಟಿ ವೆಚ್ಚದಲ್ಲಿ ಮಾಡುತ್ತಿರುವ ವಿವಾಹ ಸಮಾರಂಭವು ಕೋವಿಡ್ ಸಂಕಷ್ವದ ಸಮಯದಲ್ಲಿ ಕೂಡ ಇಷ್ಟೊಂದು ಬೃಹತ್ ಮೊತ್ತವನ್ನು ಸಂಗ್ರಹಿಸಿ ಬಡವರ ಪಾಲಿನ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ಪಾಣಕ್ಕಾಡ್ ತಂಙಳ್ ರವರ ಕುಟುಂಬ ಹಾಗೂ ಕೆಎಂಸಿಸಿಯು ದೇಶ- ವಿದೇಶದಲ್ಲಿ ಎಲ್ಲ ಸಂಘಟನೆಗಳಿಗೆ ಮಾತೃ ಸಂಸ್ಥೆಯಾಗಿದೆ. ಕೇರಳದಿಂದ ಬಂದು ಕರ್ನಾಟಕದಲ್ಲಿ ವ್ಯಾಪಾರ ಉದ್ಯಮಗಳನ್ನು ಮಾಡುವುದರ ಜೊತೆಗೆ ಬಡವರ ಕಷ್ಟ ಕಾರ್ಪಣ್ಯಗಳಿಗೆ ಒಳಗಾದ ಸಮಾಜದ ಕಟ್ಟಕಡೆಯ ಜನರಿಗೆ ಸಹಾಯ ಮಾಡುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಅನೇಕ ಅದ್ಭುತವಾದ ಕೆಲಸಗಳಾದ ಆಂಬ್ಯುಲೆನ್ಸ್ ಸೇವೆ, ಆರೋಗ್ಯ ಹಾಗೂ ಕೋವಿಡ್ ರೋಗಿಗಳ ಶವ ಸಂಸ್ಕಾರವನ್ನು ಜಾತಿ, ಮತ ಭೇದವಿಲ್ಲದೆ ಮಾಡಿರುತ್ತಾರೆ ಎಂದು ಟಿ.ಎಂ. ಶಹೀದ್ ತೆಕ್ಕಿಲ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಟಿ. ಉಸ್ಮಾನ್, ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಷಾ, ಕಾರ್ಪೊರೇಟರ್ ಅಯ್ಯಾಬ್ ಖಾನ್, ಸಯ್ಯದ್ ಹಮೀದ್ ಆಟಕೋಯ ತಂಙಳ್ ಅಲ್ ಖಾಸಿಮಿ ಅಲ್ ಬುಕಾರಿ, ಫೈಝಲ್ ಪಾತುಕುಳನ್, ಡಾ| ಮಹಬೂಬ್ ಪಾಷಾ, ಮೊಟ್ಟಿ ಕೆ ಗ್ರೀಸ್, ಸಂತೋಷ್ ಕುಮಾರ್, ಜುಬೈರ್ ಕಯಾಲ್, ಪಿ.ಎಂ. ಅಬೂಬಕ್ಕರ್ ಹಾಜಿ, ವಿ.ಎಂ. ಜಮಾಲ್ ಉಪಸ್ಥಿತರಿದ್ದರು.

Sponsors

Related Articles

Back to top button