ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ವತಿಯಿಂದ ಸಾಹಿತ್ಯೋತ್ಸವ…

ಸುಳ್ಯ: ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ವತಿಯಿಂದ ಅರಂತೋಡಿನ ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆದ ಸಾಹಿತ್ಯೋತ್ಸವದ ಧ್ವಜಾಹರೋಣವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸಾಹಿತ್ಯೋತ್ಸವ ವಿದ್ಯಾರ್ಥಿ ಪ್ರತಿಭೆಗಳನ್ನು ಪತ್ತೆ ಹಚ್ಚಿ ಸಮುದಾಯಕ್ಕೆ,ಸಮಾಜಕ್ಕೆ ಅವರನ್ನು ಅರ್ಪಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಯಾಗಲಿದೆ ಸಂಘಟನೆಯ ಶಿಸ್ತು,ಬದ್ಧತೆಯನ್ನು ಶ್ಲಾಘಿಸಿ, ಎ ಪಿ ಅಬೂಬಕ್ಕರ್ ಮುಸ್ಲಿಯರ್ ಉಸ್ತಾದ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ದೀನಿ ಮತ್ತು ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ಮತ್ತು ಅವರೊಂದಿಗೆ ಕಳೆದ 34 ವರ್ಷಗಳ ಕಾಲ ಇದ್ದ ಒಡನಾಟವನ್ನು ಸಂಪರ್ಕವನ್ನ ಸ್ಮರಿಸಿದರು. ಕಾರ್ಯಕ್ರಮಕ್ಕೆ ಸಮುದಾಯ ಭವನ ಉಚಿತವಾಗಿ ನೀಡಿ ಎಲ್ಲರಿಗೂ ಮಧ್ಯಾಹ್ನದ ಸಹ ಭೋಜನದ ವ್ಯವಸ್ಥೆಯನ್ನು ಏರ್ಪಡಿಸಿದರು. ಸಮಾರಂಭದಲ್ಲಿ ಮಸೂದ್ ಇಮಾಮಿ, ಭಶೀರ್ ಕಲ್ಲುಮುಟ್ಲು, ಸಿದ್ದಿಕ್ ಕಟ್ಟೆಕ್ಕಾರ್, ನೌಶಾದ್, ಅಜೀಜ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.