SSF ವತಿಯಿಂದ ನವ ಪದವೀಧರರಿಗೆ ಸನ್ಮಾನ ಹಾಗೂ ನೂತನ ದರ್ಸ್ ವಿದ್ಯಾರ್ಥಿಗಳಿಗೆ ಡ್ರೆಸ್ ಕಿಟ್ ವಿತರಣೆ…

ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ವತಿಯಿಂದ ರಾಷ್ಟ್ರದ ವಿವಿಧ ಇಸ್ಲಾಮಿಕ್ ಉನ್ನತ ವಿದ್ಯಾಭ್ಯಾಸ ಕೇಂದ್ರಗಳಿಂದ ಪದವೀಧರರಾದ ಯುವ ವಿದ್ವಾಂಸರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ನೂತನ ದರ್ಸ್ ಕಲಿಕೆಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ಡ್ರೆಸ್ ಕಿಟ್ ವಿತರಣೆ ಕಾರ್ಯಕ್ರಮ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಮೇ 15ರಂದು ಜರಗಿತು.
ಈ ಅಧ್ಯಯನ ವರ್ಷ ನೂತನವಾಗಿ ದರ್ಸ್ ಸೇರುತ್ತಿರುವ 30 ರಷ್ಟು ವಿದ್ಯಾರ್ಥಿಗಳಿಗೆ ಡ್ರೆಸ್ ವಿತರಣೆ ಹಾಗೂ ಡಿವಿಷನ್ ವ್ಯಾಪ್ತಿಯ 30 ರಷ್ಟು ನವ ಧಾರ್ಮಿಕ ಪದವೀಧರರಿಗೆ ಸನ್ಮಾನ ಸಮಾರಂಭ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧ್ಯಕ್ಷ ಟಿ.ಎಂ ಅಬ್ದುಲ್ ರಹಮಾನ್ ಸಖಾಫಿ ಅಧ್ಯಕ್ಷತೆಯಲ್ಲಿ ಜರಗಿತು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಎಕ್ಸಿಕುಟೀವ್ ಸಿರಾಜ್ ಹಿಮಿಮಿ ಕುಂಭಕ್ಕೋಡು ದುಆ ನೆರವೇರಿಸಿದರು. ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಾಜಿ ಪ್ರ. ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಕಾರ್ಯಕ್ರಮ ಉದ್ಘಾಟಿಸಿದರು.
ಎಸ್.ವೈ.ಎಸ್ ಸುಳ್ಯ‌ ಬ್ರಾಂಚ್ ಅಧ್ಯಕ್ಷ ಸಿದ್ದೀಖ್ ಕಟ್ಟೆಕಾರ್, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕೋಶಾಧಿಕಾರಿ ನೌಶಾದ್ ಕೆರೆಮೂಲೆ, ಸಿ.ಸಿ ಕಾರ್ಯದರ್ಶಿ ಶಮೀರ್ ಡಿ.ಹೆಚ್, ಬ್ಲಡ್ ಸೈಬೋ ಕೋರ್ಡೀನೇಟರ್ ಶರೀಫ್ ಜಯನಗರ, ಸುಳ್ಯ ಸೆಕ್ಟರ್ ಸಮಿತಿ ಸದಸ್ಯರಾದ ಆರಿಫ್ ಗಾಂಧಿನಗರ, ಸಿಯಾದ್ ಜಯನಗರ, ಇರ್ಫಾನ್ ಏಣಾವರ ಮುಂತಾದವರು ಭಾಗವಹಿಸಿದರು. ಡಿವಿಷನ್ ದಅವಾ ಕಾರ್ಯದರ್ಶಿ ಸಿದ್ದೀಖ್ ಹಿಮಮಿ ಸಖಾಫಿ‌ಸ್ವಾಗತಿಸಿ ಡಿವಿಷನ್ ಮೀಡಿಯಾ ಕಾರ್ಯದರ್ಶಿ ಸಿದ್ದೀಖ್ ಬಿ.ಎ ವಂದಿಸಿದರು.

Related Articles

Back to top button