ದ್ವಾದಶ ಯಕ್ಷಾಂಜಲಿ – ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ವತಿಯಿಂದ ತಾಳಮದ್ದಳೆ…

ಬಂಟ್ವಾಳ: ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರ ಬಿ.ಸಿ.ರೋಡ್ ನಲ್ಲಿ ಶ್ರೀ ಶಂಕರ ಸೇವಾ ಪ್ರತಿಷ್ಠಾನ , ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಹಾಗು ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಹಮ್ಮಿಕೊಂಡ ” ದ್ವಾದಶ ಯಕ್ಷಾಂಜಲಿ” ತಾಳಮದ್ದಳೆ ಯ ಅಡಿಯಲ್ಲಿ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ವತಿಯಿಂದ ” ಚೂಡಾಮಣಿ” ತಾಳಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ಸತೀಶ್ ಇರ್ದೆ , ಪದ್ಯಾಣ ಶಂಕರನಾರಾಯಣ ಭಟ್ , ಪ್ರೊ.ದಂಬೆ ಈಶ್ವರ ಶಾಸ್ತ್ರೀ , ಶ್ರೀ ಹರಿ ಪದ್ಯಾಣ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ.ಅಡಿಗ ( ಹನೂಮಂತ ) ಕಿಶೋರಿ ದುಗ್ಗಪ್ಪ ( ಶೃಂಗಾರ ರಾವಣ ) ಜಯಂತಿ ಹೆಬ್ಬಾರ್ ( ಲಂಕಿಣಿ ) ಸೀತೆ ( ಮನೋರಮಾ ಜಿ.ಭಟ್ ) ತೃಣಬಿಂದು ಮತ್ತು ಸರಮೆ ( ಶಾರದಾ ಅರಸ್ ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ಕಯ್ಯೂರು ನಾರಾಯಣ ಭಟ್ ವಂದಿಸಿದರು. ಪ್ರಶಾಂತ್ ಕುಮಾರ್ ಮುಡಿಪು ಸಹಕರಿಸಿದರು.

Sponsors

Related Articles

Back to top button