ನನ್ನ ಮತವೂ ಮುಖ್ಯ…

ನನ್ನ ಮತವೂ ಮುಖ್ಯ…
ನಿನ್ನ ಕೆಲಸ ನೀನು ಮಾಡು
ನಿನ್ನ ವ್ಯಾಪ್ತಿಯೊಳಗೆಯೇ
ನಿನಗಷ್ಟೇ ಅಧಿಕಾರವು
ಎನುವ ಸತ್ಯ ಆರಿತುಕೋ
ಪ್ರಜಾಪ್ರಭುತ್ವ ನಾಡಿನಲ್ಲಿ
ಮತವ ನೀಡೊ ಹಕ್ಕಿದೆ
ನಿನ್ನೆ ನಡೆಯು ಇಂದಿಗದುವೆ
ನಾಳೆ ಬೆಳಕ ತೋರಿದೆ
ಚಿತ್ತದಲ್ಲಿ ನಡೆಸಿ ಮಥನ
ಮತವ ನೀಡಬೇಕಿದೆ
ದೇಶದ ಭವಿಷ್ಯಕೆಂದು
ಸದೃಢ ಆಯ್ಕೆ ನಡೆದಿದೆ
ನನ್ನದೊಂದು ಮತವು
ಮುಖ್ಯ ಅಲ್ಲವೆಂದು ತಿಳಿದರೆ!
ಕಟ್ಟಡದ ಪ್ರತಿಯೊಂದು
ಇಟ್ಟಿಗೆಯು ಮುಖ್ಯವೇ!!
ರ:ಡಾ. ವೀಣಾ ಎನ್ ಸುಳ್ಯ