ಸಾಂದೀಪ್ ವಿಶೇಷ ಶಾಲೆಗೆ ಕುಡಿಯುವ ನೀರಿನ ಫಿಲ್ಟರ್ ಹಸ್ತಾಂತರ…
ಸಮಾಜದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗೆ ಸೇವೆ ನೀಡುವ ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಕಾರ್ಯ ಶ್ಲಾಘನೀಯ-ಎಂ.ಬಿ.ಸದಾಶಿವ…
ಸುಳ್ಯ:ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ದೊರೆಯಬೇಕೆಂಬ ಭಾವನೆಯೊಂದಿಗೆ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಮಾಡುವ ಸೇವೆ ಅನನ್ಯ ಹಾಗು ಶ್ಲಾಘನೀಯ ಎಂದು ಎಂ.ಬಿ.ಫೌಂಡೇಶನ್‌ನ ಅಧ್ಯಕ್ಷ ಎಂ.ಬಿ.ಸದಡಶಿವ ಹೇಳಿದ್ದಾರೆ.
ಎಲಿಮಲೆಯ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ವತಿಯಿಂದ ಎಂ.ಬಿ.ಫೌಂಡೇಶನ್ ನಡೆಸುವ ಸಾಂದೀಪ್ ವಿಶೇಷ ಶಾಲೆಗೆ ನೀಡಿದ ಕುಡಿಯುವ ನೀರಿನ ಯೋಜನೆಯ ಫಿಲ್ಟರ್ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಫಿಲ್ಟರ್ ಹಸ್ತಾಂತರ ಮಾಡಿ ಮಾತನಾಡಿದ ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಂ.ಮುಸ್ತಫ ಅವರು ಸಾಂದೀಪ್ ವಿಶೇಷ ಶಾಲೆಯನ್ನು ಸ್ಥಾಪಿಸಿ ಭಿನ್ನ ಸಾಮರ್ಥ್ಯದ ಹಲವಾರು ಮಕ್ಕಳ ಬಾಳಿಗೆ ಬೆಳಕಾದ ಎಂ.ಬಿ.ಸದಾಶಿವ ಹಾಗು ಹರಿಣಿ ಸದಾಶಿವ ಅವರ ಸೇವೆ ಮಾದರಿಯಾದುದು ಎಂದು ಹೇಳಿದರು. ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನ ಅಧ್ಯಕ್ಷ ಲತೀಫ್ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಲಿಮಲೆ ಜುಮಾ ಮಸೀದಿಯ ಮುದರಿಸ್ ಜೌಹರಿ ಅಹ್ಸನಿ ವೇಣೂರು, ಸುಳ್ಯ ತಾಲೂಕು ಅಲ್ಪ ಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ಸುಳ್ಯ ಪ್ರೆಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಮುಖ್ಯೋಪಾಧ್ಯಾಯ ಎಂ.ಎಸ್.ಎಂ. ಅಬ್ದುಲ್ ರಹೀಂ, ಫ್ರೆಂಡ್ಸ್ ಬೀಜದಕೊಚ್ಚಿಯ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ ಭಾಗವಹಿಸಿದ್ದರು. ಎಂ.ಬಿ.ಫೌಂಡೇಶನ್‌ನ ಕೋಶಾಧಿಕಾರಿ ಪುಷ್ಪಾ ರಾಧಾಕೃಷ್ಣ, ಸಲಹಾ ಸಮಿತಿ ಸದಸ್ಯ ಯಶ್ವಿತ್ ಕಾಳಂಮನೆ, ಸಾಂದೀಪ್ ವಿಶೇಷ ಶಾಲೆಯ ಮುಖ್ಯೋಪಾಧ್ಯಾಯಿನಿ ಹರಿಣಿ ಸದಾಶಿವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ.ಫೌಂಡೇಶನ್‌ನ ನಿರ್ದೇಶಕ ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ವತಿಯಿಂದ ಎಂ.ಬಿ.ಸದಾಶಿವ ಹಾಗು ಹರಿಣಿ ಸದಾಶಿವ ಅವರನ್ನು ಸನ್ಮಾನಿಸಲಾಯಿತು. ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಹಾಗು ಎಂ.ಬಿ.ಫೌಂಡೇಶನ್ ಸಲಹಾ ಸಮಿತಿ ಸದಸ್ಯ ಲತೀಫ್ ಹರ್ಲಡ್ಕ ಅವರನ್ನು ಗೌರವಿಸಲಾಯಿತು.
ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಮಾಣಿಬೆಟ್ಟು, ನುಸ್ರತುಲ್ ಇಸ್ಲಾಂ ಅಸೋಸಿಯೇಷನ್‌ನ ಜೊತೆ ಕಾರ್ಯದರ್ಶಿ ಅಶ್ರಫ್, ಸದಸ್ಯರಾದ ಹನೀಫ್ ಜೀರ್ಮುಖಿ, ಶಿಹಾಬ್ ಎಲಿಮಲೆ, ಸಾಂದೀಪ್ ಶಾಲೆಯ ಶಿಕ್ಷಕರಾದ ವನಿತಾ, ಸೌಮ್ಯ, ಫಾತಿಮಾತ್ ರಂಲಾ, ಸುಜಾತ, ಮೀನಾಕ್ಷಿ, ತೇಜಾವತಿ, ಸಿಬ್ಬಂದಿಗಳಾದ ಸತ್ಯವತಿ, ವಿನೀತ್ ಉಪಸ್ಥಿತರಿದ್ದರು.