ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ.ಶಹೀದ್ ತೆಕ್ಕಿಲ್ ನೇಮಕ…

ಸುಳ್ಯ: ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಯಾಗಿ ಸುಳ್ಯ ದ ಟಿ.ಎಂ ಶಾಹೀದ್ ತೆಕ್ಕಿಲ್ ಅವರನ್ನು ಎ.ಐ.ಸಿ.ಸಿ ನೇಮಕ ಮಾಡಿದೆ.
ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಶಿಫಾರಸ್ಸಿನೊಂದಿಗೆ ಎ.ಐ.ಸಿ.ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಮೋದನೆಯೊಂದಿಗೆ ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಕೆ.ಪಿ.ಸಿ.ಸಿ ಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಮಾಡಲಾಗಿದೆ.
ಪ್ರತಿಷ್ಠಿತ ತೆಕ್ಕಿಲ್ ಮನೆತನದ ಟಿ. ಎಂ ಶಾಹಿದ್ ತೆಕ್ಕಿಲ್ ಎನ್.ಎಸ್.ಯು.ಐ ನ ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ದ .ಕ ಜಿಲ್ಲಾ ಎನ್.ಎಸ್.ಯು.ಐ ನ ಪ್ರಧಾನ ಕಾರ್ಯದರ್ಶಿ, ರಾಜ್ಯ ಎನ್.ಎಸ್.ಯು.ಐ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಯುವ ಕಾಂಗ್ರೇಸ್ ನ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ, ಹಾಗೂ ಹಾವೇರಿ ಜಿಲ್ಲೆಯ ಹಿರೆಕೆರೂರು, ಕೊಡಗು ಜೆಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ, ದ .ಕ ಜಿಲ್ಲೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಕೆ.ಪಿ.ಸಿ.ಸಿ.ಯ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೆ.ಪಿ.ಸಿ.ಸಿ ಯ ಕೊಡಗು ಜಿಲ್ಲಾ ಸದಸ್ಯ ನೋಂದಣಿಯ ಉಸ್ತುವಾರಿಯಾಗಿದ್ದರು. ಸದಸ್ಯತ್ವ ನೋಂದಣಿಯಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಮತ್ತು ದ.ಕ ಜಿಲ್ಲೆಯಲ್ಲಿ ಗರಿಷ್ಠ ಸದಸ್ಯರನ್ನ ನೋಂದಾಯಿಸಿದ್ದು ಪಕ್ಷದ ಸಾಂಸ್ಥಿಕ ಚುನಾವಣೆಯ ಮಲಪ್ಪುರಂ ಜಿಲ್ಲೆಯ ಚುನಾವಣಾಧಿಕಾರಿಯಾಗಿದ್ದರು. ಇವರು ಸುಳ್ಯ ಅಲ್ಪಸಂಖ್ಯಾತರ ಸಹಕಾರಿ ಸಂಘದಲ್ಲಿ ಮೂರು ಬಾರಿ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ನ ಸದಸ್ಯರಾಗಿ,ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ,ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, ಎರಡು ಬಾರಿ ಕೇಂದ್ರ ನಾರುಮಂಡಳಿ ಸದಸ್ಯರಾಗಿ, ರಾಜ್ಯದ ರಾಜೀವ್ ಯೂತ್ ಪೌಂಡೇಶನ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾಗಿ ಸಂಪಾಜೆಯ ಗೂನಡ್ಕ ಸಮೂಹ ತೆಕ್ಕಿಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ , ಕರ್ನಾಟಕ ರಾಜ್ಯ ಮುಸ್ಲಿಂ ಯೂತ್ ಕೌನ್ಸಿಲ್ ನ ಪ್ರಧಾನ ಕಾರ್ಯದರ್ಶಿಯಾಗಿ, ಹಲವಾರು ಸಾಮಾಜಿಕ, ರಾಜಕೀಯ, ಕ್ರೀಡೆ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಇವರು ಪ್ರತಿಷ್ಠಿತ ತೆಕ್ಕಿಲ್ ಮನೆತನದವರಾದ ತೆಕ್ಕಿಲ್ ಮೋಹಮ್ಮದ್ ಹಾಜಿಯವರ ಮೊಮ್ಮಗ, ತೆಕ್ಕಿಲ್ ಬಾಬಾ ಹಾಜಿಯವರ ಪುತ್ರ, ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರು, ಇತಿಹಾಸ ಪ್ರಸಿದ್ಧ ಪೇರಡ್ಕ- ಗೂನಡ್ಕ ಮುಹಿಯದ್ಧೀನ್ ಜುಮಾ ಮಸೀದಿಯ ಅಧ್ಯಕ್ಷರು, ಹಾಗು ಅರಂತೋಡು ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ನ ಗೌರವಾಧ್ಯಕ್ಷರಾಗಿದ್ದಾರೆ.ಕಳೆದ 36 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿದ್ದು 2002 ರಲ್ಲಿ ರಾಜ್ಯ ಯುವ ಪ್ರಶಸ್ತಿ ವಿಜೇತರಾಗಿದ್ದರು.
ಇವರ ಪತ್ನಿ ಶಮ ಅಹಮದ್. ಲಂಡನ್ ನಲ್ಲಿ ಪದವಿ ವಿದ್ಯಾರ್ಥಿ, ಎನ್ ಎಸ್ ಯು ಐ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಯೋಜಕರಾದ ಟಿ ಎಂ ಷಾಜ್ ತೆಕ್ಕಿಲ್  ಹಾಗೂ ವಿದ್ಯಾರ್ಥಿಗಳಾದ ಟಿ ಎಂ ಶೈನ್ ತೆಕ್ಕಿಲ್, ಟಿ  ಎಂ ಶಯಾನ್ ತೆಕ್ಕಿಲ್ ಪುತ್ರರಾಗಿದ್ದಾರೆ.

Sponsors

Related Articles

Back to top button