24 ಗಂಟೆಗಳಲ್ಲಿ ಗೃಹ ಸಚಿವರನ್ನು ವಜಾ ಮಾಡಿ- ಹೆಚ್.ಡಿ. ಕುಮಾರಸ್ವಾಮಿ….

ಮಂಗಳೂರು : ಮಂಗಳೂರಿನಲ್ಲಿ ಡಿ.19 ರಂದು ನಡೆದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರನ್ನು ವಜಾ ಮಾಡಬೇಕು. ಘಟನೆಯ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು 24 ಗಂಟೆಗಳಲ್ಲಿ ಜೈಲಿಗೆ ಕಳುಹಿಸಬೇಕೆಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಪೊಲೀಸರು ಹೇಳಿಕೆಗಳನ್ನು ತಿರುಚುವ ಮೂಲಕ ಸುಳ್ಳು ಹೇಳುತ್ತಿದ್ದಾರೆ. ಹಾಗೆಯೇ ಗೋಲಿಬಾರ್‌ನಲ್ಲಿ ಮೃತಪಟ್ಟವರ ಮೇಲೆ ಎಫ್‌ಐಆರ್‌ ದಾಖಲು ಮಾಡಿರುವುದು ಅನಾಗರಿಕ ವರ್ತನೆ. ಈ ಹಿನ್ನಲೆಯಲ್ಲಿ ಇನ್‌ಸ್ಪೆಕ್ಟರ್‌ ಶಾಂತರಾಮ್‌ ಕುಂದರ್‌ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
19ರಂದು ಪ್ರತಿಭಟನೆ ನಡೆಸಲು ಎಸ್‌ಕೆ ಎಸ್‌ ಎಸ್‌ ಎಫ್‌ ಹಾಗೂ ಎಸ್‌ಎಫ್‌ಎಫ್ ಸಂಘಟನೆಗಳು ಅನುಮತಿ ಪಡೆದಿದ್ದರು. ಆದರೆ ಏಕಾಏಕಿಯಾಗಿ 18ರಂದೇ ನಿಷೇದಾಜ್ಞೆ ಜಾರಿಮಾಡಲಾಗಿದೆ. ಅಧಿಕಾರಿಗಳು ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರ ಆದೇಶ ಪಾಲಿಸುತ್ತಾರ ಅಥವಾ ಸರಕಾರದ ಆದೇಶ ಪಾಲಿಸುತ್ತಾರ ? ಎಂದು ಅವರು ಪ್ರಶ್ನಿಸಿದರು.

ಈ ಸರಕಾರ ಮನುಷ್ಯತ್ವ ಇಲ್ಲದ ಸರಕಾರ. ಆಡಳಿತ ವ್ಯವಸ್ಥೆಯೇ ಸರಿಯಿಲ್ಲ. ರಾಜ್ಯಕ್ಕೆ ಗೃಹ ಸಚಿವರೇ ಇಲ್ಲದಂತಾಗಿದೆ. ಗೃಹ ಸಚಿವರು ತನ್ನ ಸ್ಥಾನಕ್ಕೆ ಅಸಮರ್ಥರು, ಅವರನ್ನು ವಜಾ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button