ಸುಳ್ಯ ಕೆ.ವಿ.ಜಿ ವೈದ್ಯಕೀಯ ಕಾಲೇಜಿನಲ್ಲಿ ಸರಕಾರಿ ಕೋಟದಲ್ಲಿ ಎಂ.ಡಿ ಶಿಕ್ಷಣಕ್ಕೆ ಡಾ| ಸಿ ವಿ ಸಿತಾರಾ ತೆಕ್ಕಿಲ್ ಆಯ್ಕೆ…

ಸುಳ್ಯ: ಸುಳ್ಯದ ಕೆ.ವಿ.ಜಿ ವೈದ್ಯಕೀಯ ಕಾಲೇಜಿನಲ್ಲಿ ಎಂ ಡಿ ಪೆತಾಲಜಿ ವೈದ್ಯಕೀಯ ಉನ್ನತ ಶಿಕ್ಷಣ ಪಡೆಯಲು ತಾಲೂಕಿನ ಪ್ರಥಮ ಮುಸ್ಲಿಂ ಎಂ.ಬಿ.ಬಿಎಸ್ ಪದವೀದರೆ, ರೋಟರಿ ವಿದ್ಯಾ ಸಂಸ್ಥೆ ಸುಳ್ಯ ಹಾಗು ಎನ್ ಎಂ ಪಿ ಯು ಆರಂತೋಡು ಇಲ್ಲಿಯ ಹಳೆ ವಿದ್ಯಾರ್ಥಿ ಡಾ|ಸಿ ವಿ ಸಿತಾರಾ ತೆಕ್ಕಿಲ್ ಆಯ್ಕೆಯಾಗಿರುತ್ತಾರೆ.
ಇವರು 2016ರರಲ್ಲಿ ಏನೆಪೋಯ ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಪೂರ್ಣಗೊಳಿಸಿ, ಕೇರಳದ ಮಂಜೇರಿಯಲ್ಲಿ ಪತಿ ಡಾಕ್ಟರ್ ಅಬ್ದುಲ್ ಹಮೀದ್ ವಾರಂಗೋಡ್ ಜೊತೆ ವೈದ್ಯಕೀಯ ಸೇವೆಯನ್ನು ಮಾಡುತ್ತಿದ್ದಾರೆ. ಇವರು ಅರಂತೋಡಿನ ಸಿ ವಿ ರಾಫಿ ಮತ್ತು ಟಿ.ಎಂ ಜಾಹಿರಾ ತೆಕ್ಕಿಲ್ ರವರ ಸುಪುತ್ರಿಯಾಗಿದ್ದು, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ರವರ ಸಹೋದರಿಯ ಪುತ್ರಿಯಾಗಿರುತ್ತಾರೆ.

Related Articles

Back to top button