ತುಳುಕೂಟ ಆಶ್ರಯದಲ್ಲಿ ಪಾಲೆ ಕೆತ್ತೆ ಕಷಾಯ ವಿತರಣೆ…

ಬಂಟ್ವಾಳ: ತುಳುಕೂಟ ಬಂಟ್ವಾಳದ ಆಶ್ರಯದಲ್ಲಿ ಶ್ರೀರಕ್ತೇಶ್ವರೀ ದೇವಸ್ಥಾನ ಬಿ.ಸಿ.ರೋಡು ಇದರ ಆಡಳಿತ ಸಮಿತಿ ಸಹಕಾರದಲ್ಲಿ ಸಾರ್ವಜನಿಕರಿಗೆ ಪಾಲೆಕೆತ್ತೆ ಕಷಾಯ ವಿತರಣೆ ಕಾರ್ಯಕ್ರಮ ಜುಲೈ17 ರಂದು ಬೆಳಿಗ್ಗೆ 6.30 ರಿಂದ 7.30 ರವರೆಗೆ ಏರ್ಪಡಿಸಲಾಗಿದೆ. ತುಳುನಾಡಿನ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ತುಳುಕೂಟ ಅಧ್ಯಕ್ಷ ಸುದರ್ಶನ ಜೈನ್ ತಿಳಿಸಿದ್ದಾರೆ.
ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತುಳುಕೂಟದ ಪದಾಧಿಕಾರಿಗಳಾದ ಕಾಂತಾಡಿಗುತ್ತು ಸೀತಾರಾಮ ಶೆಟ್ಟಿ,ಶುಭಾಶ್ಚಂದ್ರ ಜೈನ್,ಪರಮೇಶ್ವರ ಕುಲಾಲ್ ,ಜಯಾನಂದ ಪೆರಾಜೆ, ನಾರಾಯಣ ಪೆರ್ನೆ,ರವೀಂದ್ರ ಕುಕ್ಕಾಜೆ,ಸುಕುಮಾರ್ ಬಂಟ್ವಾಳ, ದಾಮೋದರ ಏರ್ಯ,ಸದಾಶಿವ ಪುತ್ರನ್,ಹೆಚ್.ಕೆ.ನಯನಾಡು ಉಪಸ್ಥಿತರಿದ್ದರು.