ಸುಳ್ಯ ಯುವ ಕಾಂಗ್ರೆಸ್ ವತಿಯಿಂದ ಗಿಡ ಬೆಳೆಸಿ – ಜೀವನ ಉಳಿಸಿ ಕಾರ್ಯಕ್ರಮ…

ಸುಳ್ಯ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಜನ್ಮದಿನಾಚರಣೆ ಅಂಗವಾಗಿ
ಸುಳ್ಯ ಯುವ ಕಾಂಗ್ರೆಸ್ ವತಿಯಿಂದ *ಗಿಡ ಬೆಳೆಸಿ , ಜೀವನ ಉಳಿಸಿ* ಅಭಿಯಾನ ಮತ್ತು *ಗಿಡ ವಿತರಣಾ ಕಾರ್ಯಕ್ರಮ ಆ.20 ರಂದು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೋ ,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ, ನಾಯಕರಾದ ಭರತ್ ಮುಂಡೋಡಿ, ಧನಂಜಯ ಅಡಪ೦ಗಾಯ, ಪಿ. ಸಿ ಜಯರಾಮ, ನ.ಪಂ. ಸದಸ್ಯ ಷರೀಫ್ ಕಂಠಿ, ಮುಸ್ತಫಾ, ಭವಾನಿ ಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.