ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಉದ್ಘಾಟನಾ ಕಾರ್ಯಕ್ರಮ…

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ನ ಪದ್ಮ ಮಾಲ್ ವಾಣಿಜ್ಯ ಸಂಕೀರ್ಣದಲ್ಲಿ ನೂತನವಾಗಿ ಶುಭಾರಂಭಗೊಂಡ ಬಂಟ್ವಾಳ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಉದ್ಘಾಟನಾ ಕಾರ್ಯಕ್ರಮ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಖೆಯ ಉದ್ಘಾಟನೆಯನ್ನು ಬರಿಮಾರು ಸಂತ ಜೋಸೆಫರ ಚರ್ಚ್ ಧರ್ಮಗುರುಗಳಾದ ರೆ. ಫಾ ಗ್ರೆಗರಿ ಪಿರೇರಾ ರವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಿಳಿತ ಮೊಕ್ತೇಸರ ಸಚಿನ್ ರೈ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ, ಮಾಣಿ ಜಿ ಎಂ ಆರ್ ಎಂಟರ್ ರ್ಪ್ರೈಸರ್ಸ್ ಮಹಮ್ಮದ್ ರಫೀಕ್, ಪಿಯೂಸ್ ಎಲ್. ರೊಡ್ರಿಗಸ್,ಶಾಖೆಯ ಉಪಾಧ್ಯಕ್ಷರಾದ ಮಾಯಿಲಪ್ಪ ಸಾಲ್ಯಾನ್,ಶಾಖೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೇಬಿ ಕುಂದರ್, ಪದ್ಮಶೇಖರ್ ಜೈನ್,ಅಬ್ಬಾಸ್ ಅಲಿ, ಎಂ ಎಸ್ ಮೊಹಮ್ಮದ್, ನಾರಾಯಣ ನಾಯ್ಕ, ಅಮ್ಮು ಅರ್ಬಿಗುಡ್ಡೆ, ಶ್ರೀಮತಿ ಮಂಜುಳಾ ಕುಶಲ, ಸುದೀಪ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button