ಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ ಬೆಂಬಲ – ಮಾಜಿ ಶಾಸಕ ಜಯರಾಮ ಶೆಟ್ಟಿ…
ಮಂಗಳೂರು: ಜನ ಸಾಮಾನ್ಯರು ಅನುಭವಿಸುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಹಿರಿಯರ ಸೇವಾ ಪ್ರತಿಷ್ಠಾನದಿಂದ ನಡೆಯಬೇಕು. ಈ ನಿಟ್ಟಿನಲ್ಲಿ ಸಂಘಟನಾತ್ಮಕ ಸಹಕಾರವನ್ನು ನೀಡಲು ಸಿದ್ದನಿದ್ದೇನೆ ಎಂದು ಉಳ್ಳಾಲ ಕ್ಷೇತ್ರದ ಮಾಜಿ ಶಾಸಕರಾದ ಕೆ. ಜಯರಾಮಶೆಟ್ಟಿ ತಿಳಿಸಿದರು.
ಕೋಟೆಕಾರು ಕೊಲ್ಯ ಶ್ರೀಮೂಕಾಂಬಿಕಾ ಮಂದಿರದಲ್ಲಿ ಜರುಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೋಟೆಕಾರು ಶ್ರೀ ಶೃಂಗೇರಿ ಪೀಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಶ್ರೀ ಮೂಕಾಂಬಿಕ ಮಂದಿರದ ಅಧ್ಯಕ್ಷ ಮಹಾಬಲ ಶೆಟ್ಟಿ ಕೂಡ್ಲು ಮಾತನಾಡಿ ಸಂಘಟನೆಯು ಬಲಗೊಂಡು ಆರ್ಥಿಕ ಸಬಲತೆಯನ್ನು ಸಾಧಿಸಿ, ಸಾಂಸ್ಥಿಕ ರೂಪದಲ್ಲಿ ಕಾರ್ಯಾಚರಿಸುವಂತೆ ಯೋಜನೆ ಸಿದ್ಧಪಡಿಸಲು ತಿಳಿಸಿದರು.
ಯಕ್ಷಗಾನ ಸಂಘಟಕ ಪಿ.ವಿ ರಾವ್, ಕೇಂದ್ರೀಯ ವಿದ್ಯಾಲಯದ ನಿವೃತ್ತ ಅಧ್ಯಾಪಕ, ಕಲಾವಿದ ಸರ್ಪಂಗಳ ಈಶ್ವರ ಭಟ್, ಸಾಮಾಜಿಕ ಮುಂದಾಳು ಸೀತಾರಾಮ ಬಂಗೇರ, ತನಿಯಪ್ಪ ಬಂಗೇರ, ಬಿ. ಸೀತಾರಾಮ ಶೆಟ್ಟಿ ಉಜಿರೆ, ವಸಂತ ಸುವರ್ಣ ಬೆಳ್ತಂಗಡಿ, ಸಂತೋಷ್ ಕಾವೂರು, ಉದಯಶಂಕರ ರೈ, ರಮೇಶ್ ಕೊಲ್ಯ, ಪ್ರದೀಪ್ ಚಂದ್ರ ಶೆಟ್ಟಿ, ಶಶಿಕಾಂತ, ಜಯರಾಮ ಭಂಡಾರಿ ಧರ್ಮಸ್ಥಳ ಪ್ರತಿಷ್ಠಾನದ ಮುಂದಿರುವ ಕಾರ್ಯಗಳ ಬಗ್ಗೆ ಸಲಹೆಗಳನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ. ಎ.ವಿ ನಾರಾಯಣ ತಾಲೂಕು ಮತ್ತು ಹೋಬಳಿ ಹಂತಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ ಎಂದರು.
ಮಂಗಳೂರು ಕೆಎಂಸಿಯ ವೈದ್ಯಕೀಯ ಸಿಬ್ಬಂದಿ ಜಯಕರ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಷ್ಠಾನದ ಮೂಲಕ ವಿವಿಧ ಇಲಾಖೆಗಳ ನಿವೃತ್ತ ಅಧಿಕಾರಿಗಳ ತಂಡ ರೂಪಿಸಿ ಜನಸಾಮಾನ್ಯರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಡಾ. ಆರ್.ಕೆ ಶೆಟ್ಟಿ ತೊಕ್ಕೊಟ್ಟು ಮತ್ತು ಪ್ರತಿಷ್ಠಾನದ ಸಂಚಾಲಕ ನಾರ್ಯ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದ್ದರು.
ಡಾ. ಮಹಾಲಿಂಗ ಭಟ್ ಪ್ರಾರ್ಥಿಸಿದರು. ಉಳ್ಳಾಲ ವಲಯದ ಸಂಚಾಲಕ ಬಾಲಚಂದ್ರ ಶೆಟ್ಟಿ ಸೋಮೇಶ್ವರ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವರದಿ ಮಂಡಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ದುಗ್ಗಪ್ಪ. ಎನ್ ಕಾರ್ಯಕ್ರಮ ನಿರೂಪಿಸಿ ಸಹ ಸಂಚಾಲಕ ಭಾಸ್ಕರ ಬಾರ್ಯ ವಂದಿಸಿದರು.