ಬಂಟ್ವಾಳ ತಾಲೂಕು ಅರ್ಚಕರ ಮತ್ತು ಪುರೋಹಿತರ ಪರಿಷತ್ತು – ಪದಾಧಿಕಾರಿಗಳ ಆಯ್ಕೆ…
ಬಂಟ್ವಾಳ: ಬಂಟ್ವಾಳ ತಾಲೂಕು ಅರ್ಚಕರ ಮತ್ತು ಪುರೋಹಿತರ ಪರಿಷತ್ತು ನೂತನ ಘಟಕದ ಪದಾಧಿಕಾರಿಗಳ ಆಯ್ಕೆ ಆ.17 ರಂದು ಬಂಟ್ವಾಳ ತಾಲೂಕು ಬ್ರಾಹ್ಮಣ ಪರಿಷತ್ ಕಟ್ಟಡದಲ್ಲಿ ನಡೆಯಿತು.
ಅಧ್ಯಕ್ಷರಾಗಿ ವೇದಮೂರ್ತಿ ಶಿವರಾಮಯ್ಯ, ಉಪಾಧ್ಯಕ್ಷರಾಗಿ ಈಶ್ವರ ಭಟ್, ಕಾರ್ಯದರ್ಶಿಯಾಗಿ ಶ್ರೀನಿಧಿ ಮುಚ್ಚಿನ್ನಾಯ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಭಟ್ ಸುಜೀರು, ಸಂಘಟನಾ ಕಾರ್ಯದರ್ಶಿಯಾಗಿ ಎರುಂಬು ಬಾಲಕೃಷ್ಣ ಕಾರಂತ, ಖಜಾಂಚಿಯಾಗಿ ಕೆ ವಾಸುದೇವ ಭಟ್, ಸಂಚಾಲಕರಾಗಿ ವೆಂಕಟ್ರಮಣ ಭಟ್ ಪೈಕ, ಸಂಯೋಜಕರಾಗಿ ರಾಜಗೋಪಾಲಾಚಾರ್ಯ, ನಿರ್ದೇಶಕರಾಗಿ ಎo ಸುಬ್ರಹ್ಮಣ್ಯ ಭಟ್, ಸುದರ್ಶನ ಬಲ್ಲಾಳ್ ,ನವರಾಜ ಭಟ್ ,ಅಮೈ ಪ್ರಶಾಂತ್ ಭಟ್, ಸುಬ್ರಾಯ ಗೋಖಲೆ, ವಲಯ ಸಂಚಾಲಕರಾಗಿ ವೇದವ್ಯಾಸ ಪಾಂಗನಾಯ, ನೀಲಕಂಠ ಪರಾಡ್ಕರ್, ಶ್ರೀ ಹರಿಪ್ರಸಾದ್ ಉಂಡಮನೆ ಕೃಷ್ಣಭಟ್, ನಾಗರಾಜ ಭಟ್, ರಾಘವೇಂದ್ರರಾವ್, ಲಕ್ಷ್ಮೀಶ ಮಯ್ಯ, ಅನಂತರಾಮ ಐತಾಳ, ರಾಘವೇಂದ್ರ ಭಟ್ ಮುರಳೀಧರ ಭಟ್ ಆಯ್ಕೆಯಾದರು.
ಜಿಲ್ಲಾ ಘಟಕದ ಅಧ್ಯಕ್ಷರಾದ ವೇದಮೂರ್ತಿ ಕೃಷ್ಣರಾಜ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬ್ರಾಹ್ಮಣ ಪರಿಷತ್ ಅಧ್ಯಕ್ಷ ನ್ಯಾಯವಾದಿ ರಮೇಶ್ ಉಪಾಧ್ಯಾಯ ಕೊಡಿಮಜಲು, ಜಿಲ್ಲಾ ಘಟಕದ ಪದಾಧಿಕಾರಿಗಳಾದ ಶ್ರೀಹರಿ ಉಪಾಧ್ಯಾಯ, ಅನಂತ ಪದ್ಮನಾಭ ಆಚಾರ್ಯ, ಪ್ರಶಾಂತ್ ಗೋರೆ, ಶಂಕರನಾರಾಯಣ ಶರ್ಮ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ ತಂತ್ರಿ, ತಾಲೂಕು ಬ್ರಾಹ್ಮಣ ಪರಿಷತ್ತು ಕಾರ್ಯದರ್ಶಿ ರಾಘವ ಕಾರoತ, ವೇದಮೂರ್ತಿ ಪಿ ವೆಂಕಪ್ಪಯ್ಯ ಭಟ್, ವೇದಮೂರ್ತಿ ಶಿವಾನಂದ ಮಯ್ಯ ಉಪಸ್ಥಿತರಿದ್ದರು.
ಕೆ ಕೃಷ್ಣರಾಜ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತ ಪದ್ಮನಾಭ ಆಚಾರ್ಯ ನಿರೂಪಿಸಿದರು. ರಾಘವೇಂದ್ರ ಹೊಳ್ಳ ಧನ್ಯವಾದ ನೀಡಿದರು.