ಸಾರ್ವಜನಿಕ ದೀಪಾವಳಿ‌ ಉತ್ಸವ, ಬಲೀಂದ್ರ ಪಾಡ್ದನ ವಾಚನ…

ಬಂಟ್ವಾಳ ನ.3 : ಸೀತಾರಾಮ ನಗರದ ಅಶ್ವಥಡಿ ಪೆರಾಜೆ ಅಂಗನವಾಡಿ ಕೇಂದ್ರದಲ್ಲಿ ಮಾತೆಯರು ಬೆಳಕಿನ ಮರಕ್ಕೆ ಹಾಗೂ ಸಾಮೂಹಿಕವಾಗಿ ನೂರಾರು ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿ ಉತ್ಸವ ಆಚರಿಸಲಾಯಿತು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಮಧುರಾ ಕಲ್ಲಡ್ಕ ದೀಪಾವಳಿ‌ ಉತ್ಸವದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ರಾಜ್ಯವಾಳಿದ ನೆನಪಿನ ಸಂಭ್ರಮದ ಆಚರಣೆಯಾಗಿದೆ. ಬೆಳಕಿನ ಹಬ್ಬ ಮನಸ್ಸಿನ ಕತ್ತಲೆಯನ್ನು‌ ಓಡಿಸಿ ಸುಜ್ಞಾನ ಬೆಳಕು ನೀಡಲಿ.ಸಮಾಜದಲ್ಲಿ‌ ಸಾಮರಸ್ಯ ಜಾಗೃತಗೊಳ್ಳಲಿ ಎಂದು ದೀಪಾವಳಿ ಹಬ್ಬದ ಮಹತ್ವವನ್ನು ತಿಳಿಸಿದರು.
ಅಶೋಕ್ ಕುಮಾರ್ ಬರಿಮಾರು ಪೊಳಲಿ ಶೀನಪ್ಪ ಹೆಗಡೆ ವಿರಚಿತ ತುಳುವಾಲ ಬಲಿಯೇಂದ್ರ ತುಳುಪಾಡ್ದನ ವಾಚನ ಮಾಡಿದರು.
ಅಭಾಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿ, ತುಳುನಾಡಿನ ಹಬ್ಬಗಳ ಬಗ್ಗೆ ತಿಳಿಸಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಂದಿಸಿದರು. ನಾರಾಯಣ ಎಂ.ಪಿ.,ರಾಘವ ಏಣಾಜೆ,ಭಾರತಿ ಪೆರಾಜೆ,ಗಿರಿಜಾ ಅಶ್ವತ್ಥಡಿ, ಶಶಿಕಲಾ ಮಾಧವ,ವಿಟ್ಲ ಮೈತ್ರೇಯಿ ಗುರುಕುಲದ ಜಯಂತಿ ಮಾತಾಜಿ,ಭುಜಂಗ ಮಾಣಿ,ಹೊನ್ನಪ್ಪ ಸಾಲ್ಯಾನ್,ಸದಾಶಿವ‌ ಆಚಾರ್ ಮದಲಾದವರು ಉಪಸ್ಥಿತರಿದ್ದರು.

whatsapp image 2024 11 03 at 8.26.25 pm

Related Articles

Back to top button