ಅರೆ ಭಾಷೆ ಅಕಾಡೆಮಿಯ ಅಧ್ಯಕ್ಷ ಹಾಗೂ ನ.ಪಂ. ನಾಮ ನಿರ್ದೇಶನ ಸದಸ್ಯರನ್ನು ಅಭಿನಂದಿಸಿದ ಯು.ಟಿ . ಖಾದರ್…

ಸುಳ್ಯ: ಅರೆ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕವಾದ ಸದಾನಂದ ಮಾವಜಿ ಯವರನ್ನು ಮತ್ತು ಸುಳ್ಯ ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯರಾಗಿ ನೇಮಕವಾದ ಸಿದ್ದೀಕ್ ಕೊಕೊ,ರಾಜು ಪಂಡಿತ್, ಭಾಸ್ಕರ್ ಪೂಜಾರಿಯವರನ್ನು ವಿಧಾನ ಸಭಾ ಸ್ಪೀಕರ್ ಯು ಟಿ ಖಾದರ್ ಕಾಸರಗೋಡಿನ ಬೇಕಲದಲ್ಲಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್, ಕೆ ಟಿ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.