ಮಂಗಳೂರು ಮನಪಾ- ನೂತನ ಮೇಯರ್ ಆಗಿ ದಿವಾಕರ, ಉಪಮೇಯರ್ ವೇದಾವತಿ ಆಯ್ಕೆ….
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಂಟೋನ್ಮೆಂಟ್ ವಾರ್ಡ್‌ನ ದಿವಾಕರ ಪಾಂಡೇಶ್ವರ ಹಾಗೂ ನೂತನ ಉಪಮೇಯರ್ ಆಗಿ ಕುಳಾಯಿ ವಾರ್ಡ್‌ನ ವೇದಾವತಿಯವರು ಆಯ್ಕೆಯಾಗಿದ್ದಾರೆ.
60 ಕಾರ್ಪೋರೇಟರ್‌ಗಳು ಹಾಗೂ ಶಾಸಕ ವೇದವ್ಯಾಸ ಕಾಮತ್, ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರನ್ನು ಸೇರಿಸಿ ಒಟ್ಟು 63 ಮತಗಳಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗೈರು ಹಾಜರಾಗಿದ್ದರು.
ಇಂದು ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕೇಶವ ಅವರು ಸ್ಫರ್ಧಿಸಿದ್ದು ಅವರಿಗೆ 15 ಮತಗಳು (14 ಕಾರ್ಪೋರೇಟರ್‌ಗಳು ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ) ಹಾಗೂ ಬಿಜೆಪಿಯ ದಿವಾಕರ್ ಅವರಿಗೆ 46 ಮತಗಳು (44 ಕಾರ್ಪೋರೇಟರ್‌ಗಳು ಹಾಗೂ ಇಬ್ಬರು ಶಾಸಕರು) ಲಭಿಸಿದೆ.
ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಝೀನತ್ ಶಂಶುದ್ದೀನ್ ಸ್ಫರ್ಧಿಸಿದ್ದು ಅವರಿಗೆ 17 ಮತಗಳು ಹಾಗೂ ಬಿಜೆಪಿಯ ವೇದಾವತಿಯವರಿಗೆ 46 ಮತಗಳು ಲಭಿಸಿದೆ.
ಸಾರ್ವಜನಿಕ ಆರೋಗ್ಯ, ಶಿಕ್ಷಣ, ನ್ಯಾಯ ಸಮಿತಿಗೆ ಅಶ್ರಫ್, ಪೂರ್ಣಿಮಾ, ಚಂದ್ರಾವತಿ, ವರುಣ್ ಚೌಟ, ಲೋಹಿತ್, ಭರತ್ ಕುಮಾರ್, ಸುಮಿತ್ರಾ, ಪಟ್ಟಣ ಯೋಜನೆ ಸುಧಾರಣೆ ಸ್ಥಾಯಿ ಸಮಿತಿಗೆ ಅಬ್ದುಲ್ ಲತೀಫ್, ಎ.ಸಿ. ವಿನಯ ರಾಜ್, ಶರತ್ ಕುಮಾರ್, ಶಕೀಲ ಕಾವ, ಕದ್ರಿ ಮನೋಹರ ಶೆಟ್ಟಿ, ಕಿಶೋರ್ ಕೊಟ್ಟಾರಿ, ನಯನ ಆರ್., ಲೆಕ್ಕ ಪತ್ರ ಸ್ಥಾಯಿ ಸಮಿತಿಗೆ ಅನಿಲ್ ಕುಮಾರ್, ಎಂ. ಶಶಿಧರ ಹೆಗ್ಡೆ, ಜಗದೀಶ್ ಶೆಟ್ಟಿ, ಗಾಯತ್ರಿ, ಸಂಧ್ಯಾ, ರೇವತಿ, ಲೋಕೇಶ್ ಆಯ್ಕೆಯಾಗಿದ್ದಾರೆ.