ಶಾಂತಾ ಪುತ್ತೂರು ಅವರಿಗೆ ಕನ್ನಡ ಶ್ರೀ ರಾಜ್ಯ ಪ್ರಶಸ್ತಿ…

ಕಿನ್ನಿಗೋಳಿ: ಏಪ್ರಿಲ್ 18ರಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಕಥಾಬಿಂದು ಪ್ರಕಾಶನ ಹಾಗೂ ಯುಗಪುರುಷ ಕಿನ್ನಿಗೋಳಿ ಇವರ ನೇತೃತ್ವದಲ್ಲಿ ಸಾಹಿತ್ಯ ಸಂಭ್ರಮ ಕವಿಗೋಷ್ಠಿ,ಪ್ರಶಸ್ತಿ ಪ್ರಧಾನ ,ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಬೊಳುವಾರು ನಿವಾಸಿ ಶಾಂತಾ ಪುತ್ತೂರುರವರಿಗೆ ಗೌರವ ಡಾಕ್ಟರೇಟ್ ಗಾಗಿ ಅಭಿನಂದನೆ ಹಾಗೂ ಕನ್ನಡ ಶ್ರೀ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಕವಯಿತ್ರಿ ರೇಖಾ ಸುದೇಶ್ ರಾವ್ ಅಭಿನಂದನಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು,ಯುಗಪುರುಷದ ಸಂಪಾದಕ ಕೆ ಭುವನಾಭಿರಾಮ ಉಡುಪ, ಹಿರಿಯ ಸಾಹಿತಿ ಹರಿ ನರಸಿಂಹ ಉಪಾಧ್ಯಾಯ ,ಡಾ. ಕೃಷ್ಣಪ್ಪಗೌಡ, ಸಾಹಿತಿ ರತ್ನಾಕೆ ಭಟ್, ಹಿರಿಯ ಸಾಹಿತಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಮಂಗಳೂರು ವಿವಿ ಪ್ರಾಂಶುಪಾಲ ಪ್ರೊಫೆಸರ್ ಗಣಪತಿ ಗೌಡ, ಮೇಜರ್ ಜಯರಾಜ್ ,ಲೇಖಕಿ ಲಕ್ಷ್ಮಿ ವಿ .ಭಟ್ ,ಕಾಸರಗೋಡು ಕನ್ನಡ ಭವನದ ರೂವಾರಿ ಡಾಕ್ಟರ್ ವಾಮನ್ ರಾವ್ ಬೇಕಲ್, ಪತ್ರಕರ್ತ ಹಿರಿಯ ಸಾಹಿತಿ ಜಯಾನಂದ ಪೆರಾಜೆ ಉಪಸ್ಥಿತರಿದ್ದರು. ಕಥಾಬಿಂದು ಪ್ರಕಾಶನದ ಪಿ.ವಿ .ಪ್ರದೀಪ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾಶ್ರೀ ಅಡೂರು ಕಾರ್ಯಕ್ರಮ ನಿರೂಪಿಸಿದರು.