ದುಗಲಡ್ಕ-ಮಾಜಿ ಮಂಡಲ ಪ್ರಧಾನ ಎಂ ವಿ ವೆಂಕಟರಮಣ ಭಟ್ ಅವರಿಗೆ ಶ್ರದ್ಧಾಂಜಲಿ…

ಸುಳ್ಯ: ಮಾಜಿ ಮಂಡಲ ಪಂಚಾಯತಿ ಸದಸ್ಯರು, ಮಾಜಿ ಮಂಡಲ ಪ್ರಧಾನರು ಆದಂತಹ , ದುಗ್ಗಲಡ್ಕದ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಯಲ್ಲಿ ಮತ್ತು ಅಭಿವೃದ್ಧಿಯಲ್ಲಿ, ದುಗಲಡ್ಕ ಪರಿಸರದ ಯುವಕ ಸಂಘಗಳು ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ ದಿವಂಗತ ವೆಂಕಟರಮಣ ಭಟ್ ನೀರಬಿದಿರೆ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಜ. 3 ರಂದು ದುಗಲಡ್ಕ ಸರ್ಕಾರಿ ಪ್ರೌಢ ಶಾಲೆ ಸಭಾಂಗಣದಲ್ಲಿ ನಡೆಯಿತು.
ನುಡಿನಮನ ಸಲ್ಲಿಸಿ ಮಾತನಾಡಿದ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಬೆಳಾಲು ಇದರ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿ ಅವರು ದಿವಂಗತ ವೆಂಕಟ್ರಮಣ ಭಟ್ ನೀರಬಿದಿರೆಯವರು ಒಂದು ಉತ್ತಮ ಹಿನ್ನೆಲೆ ಚರಿತ್ರೆ ಹೊಂದಿರುವ ಸಾಮಾಜಿಕ ತುಡಿತದ, ಸಹಕಾರಿ ಸಂಘಗಳ ಬಗ್ಗೆ ತುಡಿತವಿರುವ ವ್ಯಕ್ತಿಯಾಗಿದ್ದರು. ಅವರಿಗೆ ಸಾಮಾಜಿಕ ಸೇವೆಯಲ್ಲಿ ವಿಸ್ತೃತವಾದ ಅನುಭವ ಮತ್ತು ಕಾಳಜಿ ಇತ್ತು. ಅವರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಪಕ್ಷಬೇಧ ಮರೆತು ಯಾವುದೇ ಸ್ವಹಿತಾಸಕ್ತಿ ಇಲ್ಲದೆ ಸಮಾಜದಲ್ಲಿ ನಾನು ಒಬ್ಬ ಪ್ರತಿನಿಧಿ, ತನ್ನ ಜವಾಬ್ದಾರಿಗೆ ಯಾವುದೇ ಕಳಂಕವಿಲ್ಲದೆ ಪಾರದರ್ಶಕ ವಸ್ತುನಿಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಅವರ ಶಾಲೆಯ ಮೇಲಿನ ಕಾಳಜಿಯು ದುಗ್ಗಲಡ್ಕ ಪ್ರೌಢ ಶಾಲೆ ಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಿತು ಎಂದು ಹೇಳಿದರು.
ನಗರ ಪಂಚಾಯತ್ ಸದಸ್ಯ, ನಿವೃತ್ತ ಪ್ರಾಂಶುಪಾಲರು ಬಾಲಕೃಷ್ಣ ಭಟ್ ಕೊಡೆಂಕಿರಿ, ಕೆ ಟಿ ವಿಶ್ವನಾಥ್ ಕೊಯಿಕುಳಿ, ಬೆಟ್ಟ ರಾಜಾರಾಮ್ ಭಟ್, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ, ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ಶೀಲಾವತಿ ಮಾಧವ, ಯತೀಶ್ ರೈ ದುಗ್ಗಲಡ್ಕ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ರಮಣ್ಯ ಎ ಯು ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ಭವಾನಿಶಂಕರ್ ಕಲ್ಮಡ್ಕ, ಗೋವಿಂದ ನಾಯ್ಕ ಕಲ್ಮಡ್ಕ, ಪೊಡಿಯಬ್ಬ ದುಗಲಡ್ಕ, ಗೋಪಾಲಕೃಷ್ಣ ಮಣಿಯಾಣಿ, ಜಯರಾಮ ಗೌಡ, ತಂಗವೇಲು ದುಗಲಡ್ಕ, ಮಾಜಿ ನಗರ ಪಂಚಾಯತ್ ಸದಸ್ಯ ಇಬ್ರಾಹಿಂ ನೀರಬಿದಿರೆ, ಮಾಜಿ ಪಂಚಾಯತ್ ಸದಸ್ಯ ಶಿವಕುಮಾರ್ ಕಂದಡ್ಕ, ವಿಜಯಕುಮಾರ್ ಕಂದಡ್ಕ, ಸಿದ್ದಿಕ್ ಕೊಕ್ಕೋ, ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಹಸೈನಾರ್ ಕೊಳಂಜಿಕೋಡಿ, ದಿನೇಶ್ ಮಣಿಯಾಣಿ, ದಯಾನಂದ ಸಾಲಿಯಾನ್, ನಾರಾಯಣ ಟೈಲರ್ ದುಗಲಡ್ಕ, ಹುಸೈನಾರ್ ಕೊಳಂಜಿಕೋಡಿ, ಶ್ರೀಮತಿ ವಾರಿಜ ಕೊರಗಪ್ಪ, ಪೂವೇಂದ್ರನ್ ಕೂಟೇಲು, ಮಂಜುನಾಥ್ ಕಂದಡ್ಕ, ಚಂದ್ರಶೇಖರ ಕಂದಡ್ಕ, ಭಾಗೇಶ್ ಕೇಟಿ , ಕೃಷ್ಣಸ್ವಾಮಿ ಕಂದಡ್ಕ, ಸಂಜೀವ ಪೂಜಾರಿ ಮೂಡೆಕಲ್ಲು, ಸಂದೀಪ ದುಗ್ಗಲಡ್ಕ, ಕೇಶವ ಪೂಜಾರಿ ದುಗ್ಗಲಡ್ಕ, ನಾರಾಯಣ ಮಣಿಯಾಣಿ, ಹಾಗೂ ಸ.ಪ್ರೌ. ಶಾಲೆಯ ಶಿಕ್ಷಕರಾದ, ವೆಂಕಟ್ರಮಣ ಗೌಡ, ಉದಯಕುಮಾರ್, ಉನ್ನಿಕೃಷ್ಣನ್ ಮೊದಲಾದವರು ಉಪಸ್ಥಿತರಿದ್ದರು.

29b53be1 D2ba 41ef 8cad 75e25b501fd1 300x169

Related Articles

Leave a Reply

Your email address will not be published. Required fields are marked *