ಸಹಾಯ ಧನ ಹಸ್ತಾಂತರ…

ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ (ರಿ) ಸಿಟಿಗುಡ್ಡೆ, ಪುತ್ತೂರು , ಶ್ರೀ ಕೃಷ್ಣ ಬಡವರ ಆಶಾಕಿರಣ ಸೇವಾ ಸಂಸ್ಥೆಯ 62 ನೇ ಯೋಜನೆಯ ಒಂದು ದಿನದ ಸಹಾಯ ಧನವನ್ನು ಈ 63ನೇ ಯೋಜನೆಯ ಜೊತೆ ಸೇರಿಸಿ ಜುಲೈ ತಿಂಗಳ ಸಹಾಯ ಧನವನ್ನು ಪೆರ್ಲದ ನಲ್ಕ ನಿವಾಸಿ ವಿಘ್ನೇಶ್ ಇವರ ಪತ್ನಿ ಶ್ರೀಮತಿ ಯಶೋಧ ಇವರಿಗೆ ಕರುಳಿನ ಕಾಯಿಲೆಯ ಮದ್ದಿಗಾಗಿ 25,000(ಇಪ್ಪತ್ತೈದು ಸಾವಿರ)ರೂ.ವನ್ನು ಸಹೃದಯಿ ದಾನಿಗಳಿಂದ ಸಂಗ್ರಹಿಸಿ ಈ ಬಡ ಕುಟುಂಬಕ್ಕೆಆ.10 ರಂದು ನಿವೃತ್ತ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಕಾಟುಕುಕ್ಕೆ ಮತ್ತು ಡಾ. ರಾಜ್ ಕುಮಾರ್ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀಮತಿ ಶಾಂತಾ ಪುತ್ತೂರುರವರ ಮೂಲಕ ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯಶೋಧರವರ ಮನೆಯವರು, ತಂಡದ ಅಧ್ಯಕ್ಷರು, ಕಾರ್ಯ ದರ್ಶಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button