ಶುಕ್ರವಾರದಿಂದ ಪವಿತ್ರ ರಂಜಾನ್ ಉಪವಾಸ ಆರಂಭ…

ಮಂಗಳೂರು: ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಶುಕ್ರವಾರದಿಂದ ಪವಿತ್ರ ರಂಜಾನ್ ಮಾಸದ ಉಪವಾಸ ಆರಂಭಗೊಳ್ಳಲಿದೆ.
ಪವಿತ್ರ ರಂಜಾನ್ ನ ಪ್ರಥಮ ಚಂದ್ರ ದರ್ಶನವು ಕೇರಳದ ಕಾಪಾಡ್ ನಲ್ಲಿ ಗುರುವಾರ ಆಗಿರುವುದರಿಂದ ಶುಕ್ರವಾರದಿಂದ ರಂಜಾನ್ ಉಪವಾಸ ಆರಂಭ ಎಂದು ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ ಸಂಯುಕ್ತ ಖಾಝಿ ಅಲ್ಹಾಜ್ ಇಬ್ರಾಹೀಂ ಮುಸ್ಲಿಯಾರ್ ಬೇಕಲ ಕರೆ ನೀಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.