ಶ್ರೀ ವಿಜ್ಞೇಶ್ವರ ಯುವಕ ಸಂಘ ನಂದಾವರ ಸಜೀಪ ಮುನ್ನೂರು -ನವೀಕೃತ ಕಟ್ಟಡ ಉದ್ಘಾಟನೆ…

ಬಂಟ್ವಾಳ: ಶ್ರೀ ವಿಜ್ಞೇಶ್ವರ ಯುವಕ ಸಂಘ ನಂದಾವರ ಸಜೀಪ ಮುನ್ನೂರು ಇದರ ನವೀಕೃತ ಕಟ್ಟಡ ಉದ್ಘಾಟನೆ ಡಿ. 21 ರಂದು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ದೀಪ ಬೆಳಗಿಸಿ ನೆರವೇರಿಸಿದರು.
ನಂದಾವರ ಕ್ಷೇತ್ರ ಪ್ರಧಾನ ಅರ್ಚಕ ಮಹೇಶ್ ಭಟ್, ಮೂರ್ತೆದಾರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಐತಾಳ್ ಕ್ಯಾಟರಿoಗ್ ಮಾಲಕ ಶಂಕರ್ ನಾರಾಯಣ ಐತಾಳ್, ಸಂಘದ ಪದಾಧಿಕಾರಿಗಳಾದ ಸುರೇಶ್ ಗಟ್ಟಿ, ಸತೀಶ್ ಗೌಡ, ಅಶೋಕ ಗಟ್ಟಿ, ಧರಣಪ್ಪ ಸಫಲಿಗ, ಸುಧೀರ್ ನಾಯಕ್, ಶ್ರೀನಿವಾಸ ಸಫಲಿಗ, ಚಂದ್ರಶೇಖರ ಗಟ್ಟಿ ಮೊದಲಾದವರು ಉಪಸ್ಥಿತರಿದ್ದರು.