ರಾಷ್ಟ್ರೀಯ ಸೇವಾ ಯೋಜನೆ ಶಿಬಿರ- ಸಾಧಕರಿಗೆ ಅಕ್ಷಯ ಸೇವಾ ಪುರಸ್ಕಾರ…

ಪುತ್ತೂರು:ಅಕ್ಷಯ ಕಾಲೇಜು ಪುತ್ತೂರು ಇದರ ನೇತೃತ್ವದಲ್ಲಿ ನನ್ನ ಭಾರತಕ್ಕಾಗಿ ಯುವಜನತೆ ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಶ್ರೀರಾಮಚಂದ್ರ ಪದವಿಪೂರ್ವ ವಿದ್ಯಾಲಯ ಅಯೋಧ್ಯಾ ನಗರ ಪೆರ್ನೆಯಲ್ಲಿ ನೆರವೇರಿತು.
ಶ್ರೀ ನವೀನ್ ಪದಬರಿ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರಿ ಸಂಘ ಪೆರ್ನೆ ಕಾರ್ಯಕ್ರಮದ‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ.ಉಮ್ಮಪ್ಪ ಪೂಜಾರಿ ಪಿ ನಿವೃತ್ತ ಡೀನ್ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳು ಮಂಗಳೂರು, ಶ್ರೀ ಗಂಗಾಧರ್ ರೈ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ನಿಸರ್ಗ ವಡ್ಯದಗಯ ಪೆರ್ನೆ , ಶ್ರೀ ಶಿವರಾಜ್ ಪಿ. ಆರ್. ಅಧ್ಯಕ್ಷರು ಯುವವಾಹಿನಿ (ರಿ) ಮಾಣಿ , ಶ್ರೀ ಸಂಪತ್ ಕೆ .ಪಕ್ಕಳ ಪ್ರಾಂಶುಪಾಲರು ಅಕ್ಷಯ ಕಾಲೇಜು ಪುತ್ತೂರು,ಡಾ.ಅಕ್ಷಯ್ ನಡುಬೈಲು ವ್ಯವಸ್ಥಾಪಕ ಟ್ರಸ್ಟಿ, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು ಪುತ್ತೂರು, ಶಿಬಿರಾಧಿಕಾರಿಗಳು ವೇದಿಕೆಯಲ್ಲಿ ಉಪಸ್ತಿತರಿದ್ದರು.

ಪೆರ್ನೆ ಪರಿಸರದ ವಿವಿಧ ಕ್ಷೇತ್ರಗಳ ಸಾಧಕರ ಸೇವೆಯನ್ನು ಗುರುತಿಸಿ ಅಕ್ಷಯ ಸೇವಾ ಪುರಸ್ಕಾರವನ್ನು ನೀಡಲಾಯಿತು. ಶ್ರೀ ಲೋಕಯ್ಯ ಶೇರ (ದೈವ ನರ್ತಕರು) ,ಶ್ರೀ ಪ್ರಹ್ಲಾದ್ ಶೆಟ್ಟಿ ಜೆ. ಶಿಕ್ಷಣ ಕ್ಷೇತ್ರ,ಶ್ರೀ ಹರೀಶ್ ಪೆರ್ಗಡೆ ಸಮಾಜ ಸೇವಾ ಕ್ಷೇತ್ರ, ಶ್ರೀ ಮೋನಪ್ಪ ಗೌಡ ಕಳೆಂಜ ಕೃಷಿ ಕ್ಷೇತ್ರ, ಡಾ.ಯಾಕೂಬ್ ಕಡಂಬು,ವೈದ್ಯಕೀಯ ಕ್ಷೇತ್ರ, ಶ್ರೀಮತಿ ವಿದ್ಯಾಸನತ್ ಶೆಟ್ಟಿ. ಕಲಾ ಕ್ಷೇತ್ರ, ಶ್ರೀ ಜಯಾನಂದ ಪೆರಾಜೆ ಸಾಹಿತ್ಯ ಕ್ಷೇತ್ರ, ಶ್ರೀ ವಿದ್ಯಾಧರ್ ಪೂಜಾರಿ ನಿವೃತ್ತ ಸೈನಿಕರು, ಶ್ರೀಮತಿ ರೋಹಿಣಿ ಬಿ. ಕ್ರೀಡಾ ಕ್ಷೇತ್ರ, ಶ್ರೀ ಬಾಲಕೃಷ್ಣ ಸಾಲ್ಯಾನ್ ಸಮಾಜ ಸೇವೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
‘ಶಿಬಿರವಾಣಿ’ ಯನ್ನು ಅಧ್ಯಕ್ಷರು ಅನಾವರಣಗೊಳಿಸಿದರು. ಲಿಖಿತ ಸ್ವಾಗತಿಸಿ,ವೈಭವಿ ವಂದಿಸಿದರು. ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಅಕ್ಷಯ ಕಲಾ ವೈಭವ – ‘ವಿಶ್ವ ಗುರು ಭಾರತ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

Back to top button