ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಕಬ್ಬಿಣಾಂಶ ಮಾತ್ರೆ,ಹುಳ ಮಾತ್ರೆ ಮತ್ತು ಹೆಣ್ಣು ಮಕ್ಕಳ ಸ್ಯಾನಿಟರ್ ಪ್ಯಾಡ್ ವಿತರಣೆಯನ್ನು ತಕ್ಷಣ ಪ್ರಾರಂಭಿಸಲು ಆರೋಗ್ಯ ಸಚಿವರಿಗೆ ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ರಿಂದ ಮನವಿ…

ಬೆಂಗಳೂರು: ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ರವರು ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡುರಾವ್ ರನ್ನು ಬೇಟಿ ಮಾಡಿ ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಕಬ್ಬಿಣಾಂಶ ಮಾತ್ರೆ, ಹುಳದ ಮಾತ್ರೆ ಮತ್ತು ಹೆಣ್ಣು ಮಕ್ಕಳ ಸ್ಯಾನಿಟರ್ ಪ್ಯಾಡ್ ವಿತರಣೆಯನ್ನು ಸುಚಿ ಯೋಜನೆ ಸಮರ್ಪಕವಾಗಿ ಮುಂದುವರಿಸಲು ಮನವಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಆಗುವ ತೊಂದರೆಗಳ ಬಗ್ಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಐ.ಎ.ಎಸ್. ಮತ್ತು ಆರೋಗ್ಯ ಇಲಾಖೆಯ ಆಯುಕ್ತರಾದ ರಣದೀಪ್ ಐ.ಎ.ಎಸ್ ಇವರಿಗೆ ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಲು ಆದೇಶಿಸಿದರು.

whatsapp image 2024 01 19 at 2.56.57 pm

Sponsors

Related Articles

Back to top button