ಸುದ್ದಿ

ದುರಸ್ತಿಗೊಂಡ ಕೂಳೂರು ಹಳೇ ಸೇತುವೆ ಸಂಚಾರಕ್ಕೆ ಮುಕ್ತ…

ಮಂಗಳೂರು: ಕೂಳೂರು ಹಳೇ ಸೇತುವೆಯನ್ನು ನೂತನ ತಂತ್ರಜ್ಞಾನದೊಂದಿಗೆ ದುರಸ್ತಿ ಮಾಡಲಾಗಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಸಾಂಕೇತಿಕವಾಗಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮೈಕ್ರೋ ಕೊನ್ಟೆಸ್ಟ್ ತಂತ್ರಜ್ಞಾನದೊಂದಿಗೆ ಇದನ್ನು 38ಲಕ್ಷ ರೂ.ವೆಚ್ಚದಲ್ಲಿ ದುರಸ್ತಿ ಗೊಳಿಸಲಾಗಿದೆ.ಈ ಸೇತುವೆ ಜೀರ್ಣಾವಸ್ಥೆಯಲ್ಲಿತ್ತು.ಇದನ್ನು ದುರಸ್ತಿ ಮಾಡದೆ ನೂತನ ಸೇತುವೆ ನಿರ್ಮಾಣಕ್ಕಿಳಿದರೆ ವಾಹನ ಓಡಾಟಕ್ಕೆ ಸಮಸ್ಯೆ ಆಗಲಿದೆ. ಹೀಗಾಗಿ ಇದನ್ನು ದುರಸ್ತಿ ಗೊಳಿಸಲಾಗಿದೆ. ಹೊಸ ಸೇತುವೆ ಶೀಘ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಡಾ.ಭರತ್ ಶೆಟ್ಟಿ, ನಿತಿನ್ ಕುಮಾರ್, ತಿಲಕ್ ರಾಜ್ ಕೃಷ್ಣಾಪುರ,ಹೆದ್ದಾರಿ ಅಧಿಕಾರಿ ಶಿಶು ಮೋಹನ್ ಉಪಸ್ಥಿತರಿದ್ದರು.

Advertisement

Related Articles

Back to top button