ಕೀರ್ತನ್ ದೀಕ್ಷಿತ್ ಅವರಿಗೆ ಡಾಕ್ಟರೇಟ್ ಪದವಿ…

ಮಂಗಳೂರು: ಮಂಗಳೂರಿನ ಎ ಜೆ ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ವಿಟಿಯು ವಿಸ್ತರಣಾ ಕೇಂದ್ರದಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿರುವ ಕೀರ್ತನ್ ದೀಕ್ಷಿತ್ ಎ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಆನ್‌ಲೈನ್ ಆಹಾರ ಚಿಲ್ಲರೆ ವ್ಯಾಪಾರಿಗಳು ಅಳವಡಿಸಿಕೊಂಡಿರುವ ಮಾರ್ಕೆಟಿಂಗ್ ತಂತ್ರಗಳ ವಿಶ್ಲೇಷಣೆಯ ಅಧ್ಯಯನ ಮಾಡಿರುವ ಅವರು “A Study on analysis of Marketing Strategies adopted by Online Food Retailers in Bengaluru – A Case Study of Swiggy and Zomato” ಎನ್ನುವ ವಿಷಯದ ಬಗ್ಗೆ ಡಾ.ಅಪ್ಪಸಾಬ ಎಲ್ ಬಿ ಅವರ ಮಾರ್ಗದರ್ಶನದಲ್ಲಿ ಅವರು ಪ್ರಬಂಧ ಮಂಡಿಸಿದ್ದರು.
ಅವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಮ್ಯಾನೇಜ್‌ಮೆಂಟ್ ವಿಭಾಗದ ಅಡಿಯಲ್ಲಿ ಪಿಎಚ್‌ಡಿ ನೀಡಲಾಗಿದೆ.

Sponsors

Related Articles

Back to top button