ಮಂಗಳೂರು ವಿವಿ ಗೌರವ ಡಾಕ್ಟರೇಟ್ ಪುರಸ್ಕೃತ ಯು.ಕೆ.ಮೋನು ಕಣಚೂರು ಅವರಿಗೆ ಸನ್ಮಾನ…
ಮಂಗಳೂರು: ಆರ್ಥಿಕ ಶ್ರೀಮoತಿಕೆ ಯೊಂದಿಗೆ ಹೃದಯ ಶ್ರೀಮಂತಿಕೆ ಹೊಂದಿ, ವಿದ್ಯಾದಾನ ಮತ್ತು ಆರೋಗ್ಯದಾನ ದಂತಹ ಶ್ರೇಷ್ಠ ಕಾರ್ಯ ಮಾಡಿ ಸಾಧನೆಗೆ ಜೀವನದಲ್ಲಿ ಬಡತನ ಅಡ್ಡಿಯಲ್ಲ ಎಂದು ಸಾಬೀತು ಪಡಿಸಿದ ಕಣಚೂರ್ ಮೋನು ಹಾಜಿಯವರ ಸಾಧನೆ ನಮಗೆ ಮಾರ್ಗದರ್ಶನ, ಯುವಕರಿಗೆ ಸ್ಫೂರ್ತಿ ಎಂದು ದ. ಕ. ಜಿಲ್ಲಾ ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್ ಹೇಳಿದರು.
ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಕಣಚೂರು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಂಸ್ಥಾಪಕರು,ಕಣಚೂರು ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಮಾಲಕರು, ದ ಕ ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷರು,ಉಳ್ಳಾಲ ದರ್ಗಾ ಶರೀಫ್ ನ ಮಾಜಿ ಅಧ್ಯಕ್ಷರು,
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಮಾಜಿ ಉಪಾಧ್ಯಕ್ಷರು ಆದ ಹಾಜಿ ಯು. ಕೆ.ಮೋನು ಕಣಚೂರು ಇವರಿಗೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನೀಡಿದ ಸನ್ಮಾನ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಣಚೂರು ಮೋನು ರವರು ಜನರ, ಪ್ರೀತಿ ವಿಶ್ವಾಸಗಳಿಸಲು ಸಮಾಜ ಸೇವೆಯಿಂದ ಸಾಧ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ ಮಂಗಳೂರು ಅಭಿವೃದ್ಧಿ, ಶಾಂತಿ ಸೌಹಾರ್ದತೆ, ಸಾಮರಸ್ಯದ ನೆಲೆವೀಡಾಗಿಸಿ ಭವಿಷ್ಯದ ಮಾದರಿ ಜಿಲ್ಲೆಯಾಗಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಎಂ.ಶಹೀದ್ ತೆಕ್ಕಿಲ್,ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ.ಮುಸ್ತಫ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಶಾಹುಲ್ ಹಮೀದ್,ಮುಸ್ಲಿಂ ಸೆಂಟ್ರಲ್ ಕಮಿಟಿ ಸಂಘಟನಾ ಕಾರ್ಯದರ್ಶಿ ಎಸ್. ಸಂಶುದ್ದೀನ್,ಪುತ್ತೂರು ಸಯ್ಯದ್ ಮಲೆ ಜುಮ್ಮಾ ಮಸೀದಿ ಅಧ್ಯಕ್ಷ ಅಡ್ವೋಕೇಟ್ ನೂರುದ್ದೀನ್ ಸಾಲ್ಮರ,
ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಪಿ. ಎ. ಮಹಮ್ಮದ್, ಕೃಷಿ ಸಮಾಜ ದ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ,ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಖಾಲಿದ್ ಉಜಿರೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್,ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸಿದ್ದೀಕ್ ಕೊಕ್ಕೋ,
ರಾಜ್ಯ ಯುವ ಕಾಂಗ್ರೆಸ್ ಮಾಜಿ ಸಂಯೋಜಕ ಸಮದ್ ಸೋಂಪಾಡಿ, ಅನ್ಸಾರ್ ನಿರ್ದೇಶಕ ಬಶೀರ್ ಸಪ್ನ
ಮೊದಲಾದವರು ಉಪಸ್ಥಿತರಿದ್ದರು.