ಪ್ರೌಢಶಾಲಾ ಶಿಕ್ಷಕರುಗಳಿಗೆ ವಿಷಯವಾರು ತರಬೇತಿ ಮತ್ತು ಸಮಾಲೋಚನಾ ಶಿಬಿರ…

ತರಬೇತಿ ಅಧಿವೇಶನಗಳಿಂದ ಇಂದಿನ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ಸಜ್ಜು ಗೊಳಿಸಲು ಸಹಕಾರಿ :ಕೆ. ಎಂ. ಮುಸ್ತಫ...

ಸುಳ್ಯ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಗಳ ಸಂಯುಕ್ತ ಆಶ್ರಯದಲ್ಲಿ ಸುಳ್ಯ ನಾವೂರು ಗ್ರೀನ್ ವ್ಯೂ ಸಭಾಂಗಣ ದಲ್ಲಿ ಪ್ರೌಢ ಶಾಲಾ ಶಿಕ್ಷಕರು ಗಳಿಗೆ ಕೋರ್ ವಿಷಯ ಗಳ ಸಮಾಲೋಚನಾ ಮತ್ತು ತರಬೇತಿ ಶಿಬಿರ ಜರಗಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಗ್ರೀನ್ ವ್ಯೂ ಸಂಸ್ಥೆ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ ಉದ್ಘಾಟನೆ ಮಾಡಿದರು. ಸುಳ್ಯ ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಆಶಾ ನಾಯಕ್ ಪ್ರಸ್ತಾವನೆ ಗೈದರು. ಶುಭಾಶoಸನೆ ಮಾಡಿದ ಮೀಫ್ ಒಕ್ಕೂಟ ದ. ಕ. ಮತ್ತು ಉಡುಪಿ ಜಿಲ್ಲೆಗಳ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಇಂತಹ ಶಿಬಿರಗಳು ವಿದ್ಯಾರ್ಥಿಗಳನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಣಾಮಕಾರಿಯಾಗಿ ಸಜ್ಜು ಗೊಳಿಸಲು ಸಹಕಾರಿಯಾಗುವುದು ಎಂದರು.
ವೇದಿಕೆಯಲ್ಲಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಗ್ರೀನ್ ವ್ಯೂ ಪ್ರದಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಮಾಜಿ ಸಂಚಾಲಕ ಮುಹಿಯದ್ದೀ ನ್, ಶಿಕ್ಷಣ ಇಲಾಖೆಯ ಚಿನ್ನಪ್ಪ, ಪ್ರವೀಣ್ ಕುಮಾರಿ,ರಮ್ಯಾ ಸುಂದರ್ ಮೊದಲಾದವರು ಉಪಸ್ಥಿತರಿದ್ದರು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಗಳ ಬಗ್ಗೆ ಶಿಕ್ಷಕರುಗಳಿಗೆ ತರಬೇತಿ ನೀಡಲಾಯಿತು, ಗ್ರೀನ್ ವ್ಯೂ ಮುಖ್ಯ ಶಿಕ್ಷಕ ಇಲ್ಯಾಸ್ ಸ್ವಾಗತಿಸಿ, ಹಿರಿಯ ಶಿಕ್ಷಕಿ ಜಯಂತಿ, ಶಿಕ್ಷಕರುಗಳಾದ ಮಂಜುನಾಥ್ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.

whatsapp image 2025 01 07 at 12.54.55 pm (1)

whatsapp image 2025 01 07 at 12.54.54 pm

Sponsors

Related Articles

Back to top button