ಸುಳ್ಯದಲ್ಲಿ ವಾಟ್ಸಪ್ಪ್ ಗ್ರೂಪ್ ನಿಂದ ಶೈಕ್ಷಣಿಕ, ಸಾಮಾಜಿಕ ಸೇವೆಯ ಮಾದರಿ ಕಾರ್ಯ…
ಪೋಷಕರ ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ...
ಸುಳ್ಯ: ಕೆಎ 21 ವಾಟ್ಸಪ್ಪ್ ಗ್ರೂಪ್ ನಿಂದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ಸುಳ್ಯ ಅನ್ಸಾರಿಯ ಗಲ್ಫ್ ಆಡಿಟೋರಿಯಂನಲ್ಲಿ ಜರಗಿತು.
ಯೇನೆಪೋಯ ಪಿ ಯು ಕಾಲೇಜು ಆಡಳಿತಾಧಿಕಾರಿ ಸಿನಾನ್ ಮತ್ತು ತಂಡದವರಿಂದ ಉಪಯುಕ್ತ ಶೈಕ್ಷಣಿಕ ಮಾಹಿತಿ, ಕೋರ್ಸ್ ಗಳ ಆಯ್ಕೆ, ಎಸ್ಎಸ್ಎಲ್ಸಿ, ಪಿಯುಸಿ ಮುಂದೇನು, ಪೋಷಕರ ಜವಾಬ್ದಾರಿ, ವಿದ್ಯಾರ್ಥಿಗಳಿಗೆ ಭವಿಷ್ಯತ್ ರೂಪಿಸುವ ಟಿಪ್ಸ್ ಮೊದಲಾದ ವಿಷಯ ಗಳಲ್ಲಿ ಪರಿಣಾಮಕಾರಿ ತರಬೇತಿ ನೀಡಲಾಯಿತು.
ಅನ್ಸಾರಿಯ ಎಜುಕೇಶನ್ ಸೆಂಟರ್ ತಂಞಳ್ ದುಃವ ಪ್ರಾರ್ಥನೆ ನೆರವೇರಿಸಿದರು, ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಮೀಫ್ ) ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸ್ವಾಗತಿಸಿ ವಿಷಯ ಪ್ರಸ್ತಾವನೆ ಗೈದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಶಿಕ್ಷಣ ತಜ್ಞ ಸಿನಾನ್ ಮಾತನಾಡಿ ಜೆಇಇ, ನೀಟ್ ಉಚಿತ ಕ್ರ್ಯಾಶ್ ಕೋರ್ಸ್, ಉಚಿತ ವೃತ್ತಿ ಪರ ಸೀಟ್ ಗಳ ಮೊದಲಾದ ಮಾಹಿತಿಯನ್ನು ನೀಡಿದರು. ಐಮನ್ ಇನ್ನಿತರರು ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಆಗಮಿಸಿದ್ದ ಗಣ್ಯ ವ್ಯಕ್ತಿಗಳು ಗಿಡಕ್ಕೆ ನೀರು ಎರೆಯುವ ಮೂಲಕ ಸರಳವಾಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು
ಕೆಎ 21 ವಾಟ್ಸಪ್ಪ್ ಗ್ರೂಪ್ ನ ಅಡ್ಮಿನ್ ಫೈಝಲ್ ಕಟ್ಟೆಕ್ಕಾರ್ಸ್ ka 21 ವಾಟ್ಸಪ್ಪ್ ಗ್ರೂಪ್ ಈ ಗಾಗಲೇ 10 ಹಲವು ಜನಪರ ಕಾರ್ಯಕ್ರಮ ಗಳನ್ನು ಹಮ್ಮಿಕೊoಡು ಬರುತ್ತಿದ್ದು, ಶಿಕ್ಷಣ ಕ್ಕೆ ಹೆಚ್ಚಿನ ಆದ್ಯತೆ ಯನ್ನು ನೀಡಲಾಗುತ್ತಿದೆ, ಇಂತಹ ಕಾರ್ಯಕ್ರಮ ಗಳಿಗೆ ಅನೇಕ ಹಿತೈಷಿ ಗಳು ನಮಗೆ ಪ್ರೋತ್ಸಾಹ ನೀಡಿರುತ್ತಾರೆ ಅದರಲ್ಲಿ ಸುಳ್ಯ ಮೂಲದ ಬಹರೈನ್ ನಲ್ಲಿರುವ ರಿಯಾಜ್ ಜಿ. ಎ. ರವರ ಸಹಕಾರ ಉಲ್ಲೇಖನೀಯ ಎಂದರು
ವಾಟ್ಸಪ್ಪ್ ಗ್ರೂಪ್ ನ ಸದಸ್ಯರುಗಳಾದ ಶಮೀರ್ ಮೊಬೈಲ್ ಹಾರ್ಟ್, ಸಮದ್ ಕಲ್ಲಪಳ್ಳಿ, ಇರ್ಷಾದ್, ರಹೀ0, ಮುನಾಫರ್, ನಾಸಿರ್ ಕಮ್ಮಾಡಿ, ಅತಾವುಲ್ಲ ಕೆ. ಎಂ ಮೊದಲಾದವರು ಕಾರ್ಯಾಗಾರ ದಲ್ಲಿ ಸಹಕರಿಸಿದರು.