ತೆಕ್ಕಿಲ್ ಸೋಕರ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದ ಬಿ ಯುನೈಟೆಡ್ ಗೂನಡ್ಕ- ರನ್ನರ್ಸ್ ಅರಂತೋಡು…

ಸುಳ್ಯ: ತೆಕ್ಕಿಲ್ ಪ್ರತಿಷ್ಠಾನ (ರಿ) ಅರಂತೋಡು ಇದರ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಾಹೀದ್ ತೆಕ್ಕಿಲ್ ರವರ 50ನೇ ಹುಟ್ಟುಹಬ್ಬದ ಪ್ರಯುಕ್ತ ತೆಕ್ಕಿಲ್ ಸೋಕರ್ ಕ್ಲಬ್ ಹಮ್ಮಿಕೊಂಡ ತೆಕ್ಕಿಲ್ ಸೋಕರ್ ಲೀಗ್ ಪುಟ್ಬಾಲ್ ಪಂದ್ಯಾಟದ ಚಾಂಪಿಯನ್ ಆಗಿ ಬಿ ಯುನೈಟೆಡ್ ಗೂನಡ್ಕ ಹಾಗು ರನ್ನರ್ಸ್ ಆಗಿ ಅಡೋಕ್ ಅರಂತೋಡು ಹೊರಹೊಮ್ಮಿದರು. ಪ್ರಥಮ ಬಹುಮಾನ ರೂ.5000 ಹಾಗು ಶಾಶ್ವತ ಫಲಕ , ದ್ವಿತೀಯ ಬಹುಮಾನ ರೂ.3000 ಹಾಗು ಶಾಶ್ವತ ಫಲಕವನ್ನು ನಿಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಟಿ ಎಂ ಶಾಹೀದ್ ತೆಕ್ಕಿಲ್ ಅವರು ಯುವಕರು ಸಮಾಜದಲ್ಲಿ ಇಂತಹ ಕಾರ್ಯಕ್ರಮ ಮಾಡುವುದರೊಂದಿಗೆ ಶಾಂತಿ ಸೌಹಾರ್ದತೆ ವಾತಾವರಣ ಸೃಷ್ಟಿಯಾಗುತ್ತದೆ. ಯುವ ಸಮೂಹ ನಾಯಕತ್ವ ಗುಣ ಮತ್ತು ಸಂಘಟನಾ ಪ್ರವೃತ್ತಿ ಬೆಳಸಿ ಬೆಳವಣಿಗೆ ಹೊಂದಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ,ಸುಳ್ಯ ತಾಲೂಕು NSUI ಅಧ್ಯಕ್ಷರಾದ ಕೀರ್ತನ್ ಕೊಡೆಪಾಲ,ಗ್ರಾಮ ಪಂಚಾಯತ್ ಸದಸ್ಯರಾದ ಅಬುಶಾಲಿ ಪಿ ಕೆ, ಎಸ್ ಕೆ ಹನೀಫ,ಉಮ್ಮರ್ ಹಾಜಿ ಗೂನಡ್ಕ, ಅಬ್ದುಲ್ಲ ಸಿ ಎಂ, ಅಯ್ಯುಬ್ ಗೂನಡ್ಕ, ಉಬೈಸ್ ಗೂನಡ್ಕ, ಅಶ್ರಫ್ ತೆಕ್ಕಿಲ್, ಮಹಮ್ಮದ್ ಪೆಲತಡ್ಕ ಉಪಸ್ಥಿತರಿದ್ದರು
ವಿಶೇಷವಾಗಿ ಕಾರ್ಯಕ್ರಮ ಸಂಘಟಿಸಿದ ಯುವಕರನ್ನು ಸರ್ವರೂ ಮುಕ್ತ ಕಂಠದಿಂದ ಶ್ಲಾಘಿಸಿದರು.

Related Articles

Back to top button