ಮನೆ ಕುಸಿತ – ಬಿ. ರಮಾನಾಥ ರೈ ಭೇಟಿ…
ಬಂಟ್ವಾಳ: ಇರ್ವತ್ತೂರು ಬಿ. ಎಸ್. ನಗರ ನಿವಾಸಿ ಫೈರೋಜ್ ಅವರ ಮನೆ ಕುಸಿದು ಬಿದ್ದು ಸಂಪೂರ್ಣ ಹಾನಿಗೀಡಾಗಿದ್ದ ಮನೆಗೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಅವರು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅವರು ಇಲಾಖಾ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಲು ಸೂಚಿಸಿದರು. ತಹಶೀಲ್ದಾರ್ ಮತ್ತು ಕಂದಾಯ ನೀರಿಕ್ಷರೊಂದಿಗೆ ಮಾತುಕತೆ ನಡೆಸಿ ಶೀಘ್ರವಾಗಿ ಪರಿಶೀಲಿಸಲು ಸೂಚಿಸಿ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಪರಿಶಿಷ್ಠ ಜಾತಿ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಗಂಗಯ್ಯ ಡಿ. ಎನ್. ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ಇರ್ವತ್ತೂರು ಪದವು, ಇರ್ವತ್ತೂರು ವಲಯ ಕಾಂಗ್ರೇಸ್ ಅಧ್ಯಕ್ಷರಾದ ಪ್ರಶಾಂತ್ ಜೈನ್ ಸೇವಾ ಗುತ್ತು, ಯುವ ಕಾಂಗ್ರೇಸ್ ಅಧ್ಯಕ್ಷರಾದ ಹೈದರ್ ಪಂಜೋಡಿ,ನಿಕಟ ಪೂರ್ವ ಪಂಚಾಯತ್ ಸದಸ್ಯರುಗಳಾದ ಪ್ರಶಾಂತ್ ಕೋಟ್ಯಾನ್ ಮೇಗಿನಮನೆ, ಸುಧೀಂದ್ರ ಶೆಟ್ಟಿ ಎರ್ಮೆನಾಡು,ಜಯಶ್ರೀ ಕಲಾಬಾಗಿಲು, ಇರ್ವತ್ತೂರು ದಲಿತ ಸಂಘದ ಅಧ್ಯಕ್ಷರಾದ ಸುಂದರ್ ಸಾಲ್ಯಾನ್ ಪಂಜೋಡಿ ಇರ್ವತ್ತೂರು, ಬೂತ್ ಕಾಂಗ್ರೇಸ್ ಅಧ್ಯಕ್ಷರುಗಳಾದ ಪದ್ಮನಾಭ ಶೆಟ್ಟಿ ಮಠ, ಮನ್ಸೂರ್ ಇಲಾಹಿ, ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ನಝೀರ್ ಸಾಹೇಬ್, ಪ್ರಮುಖರಾದ ಶೇಖ್ ರಹ್ಮತ್ತುಲ್ಲ, ಗಂಗಾಧರ ಶೆಟ್ಟಿ, ಶ್ರಾವಣ್ ಡಿ. ಎನ್.ಉಪಸ್ಥಿತರಿದ್ದರು.