ಜಂಇಯತುಲ್ ಫಲಾಹ್ ಮಾಜಿ ಜಿಲ್ಲಾಧ್ಯಕ್ಷ ಪಿ. ಬಿ. ಅಬ್ದುಲ್ ರಝಾಕ್ ಇನ್ ಫ್ಯಾಶನ್ ನಿಧನ…
ಮೀಫ್ ಉಪಾಧ್ಯಕ್ಷ ಮುಸ್ತಫ ಸುಳ್ಯ , ಕೆಪೆಕ್ ಮಾಜಿ ನಿರ್ದೇಶಕ ಪಿ.ಎ ಮಹಮ್ಮದ್ ಸಂತಾಪ...

ಮಂಗಳೂರು: ದ. ಕ. ಮತ್ತು ಉಡುಪಿ ಜಿಲ್ಲೆಗಳ ಸಮಾಜ ಸೇವಾ ಸಂಸ್ಥೆ ಜಂಇಯತುಲ್ ಫಲಾಹ್ ಇದರ ಮಾಜಿ ಅಧ್ಯಕ್ಷ, ಶಿಕ್ಷಣ ಪ್ರೇಮಿ, ಕೊಡುಗೈ ದಾನಿ, ಉದ್ಯಮಿ, ಪಿ. ಬಿ. ಅಬ್ದುಲ್ ರಝಾಕ್ ರವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ಸಾಮಾಜಿಕ ಕಳಕಳಿ, ಸಾತ್ವಿಕ ಸ್ವಭಾವ ನಮಗೆ ಮಾದರಿ. ಸರ್ವಶಕ್ತನಾದ ಅಲ್ಲಾಹು ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ, ಆಮೀನ್ ಕುಟುಂಬಕ್ಕೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿ ಅಲ್ಲಾಹು ನೀಡಲಿ ಎಂದು ಮೀಫ್ ಉಪಾಧ್ಯಕ್ಷ ಮುಸ್ತಫ ಸುಳ್ಯ , ಕೆಪೆಕ್ ಮಾಜಿ ನಿರ್ದೇಶಕ ಪಿ.ಎ ಮಹಮ್ಮದ್ ಸಂತಾಪ ಸೂಚಿಸಿದ್ದಾರೆ.