ಸಂಪಾಜೆ ಗ್ರಾಮ ಪಂಚಾಯತ್ – ಕೆ. ಡಿ. ಪಿ. ಸಭೆ…
ಸುಳ್ಯ: ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಅದ್ಯಕ್ಷತೆಯಲ್ಲಿ ಕೆ. ಡಿ. ಪಿ. ಸಭೆ ನಡೆಯಿತು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಆಗಮಿಸಿ ಇಲಾಖೆಯ ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಅನುಪಮ, ಗ್ರಾಮ ಪಂಚಾಯತ್ ಮಾಜಿಅಧ್ಯಕ್ಷರುಗಳಾದ ಜಿ. ಕೆ. ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ, ಸಾಮಾಜಿಕ ಅರಣ್ಯ ಇಲಾಖೆಯ ವೀರಬದ್ರಯ್ಯ, ಹಾಲು ಉತ್ಪಾದಕರ ಸಂಘದ ಶಾಂತಿ ಬಿ. ರೈ, ಆರೋಗ್ಯ ಇಲಾಖೆಯ ಹರ್ಷಿತಾ, ಶಿಕ್ಷಣ ಇಲಾಖೆಯ ಭವಾನಿ ಹಾಗೂ ಚಂದ್ರಾವತಿ ಅಂಗನವಾಡಿ ಮೇಲ್ವಿಚಾರಕಿ ದೀಪಿಕಾ,ಪ್ರಾಥಮಿಕ ಆರೋಗ್ಯ ಕೇಂದ್ರ ಅರಂತೋಡು ಮಧುಶ್ರಿ ಪಿ. ಆರ್, ಡಿ. ಸಿ. ಸಿ.ಬ್ಯಾಂಕ್ ನ ನವೀನ್ ಕುಮಾರ್, ಸಂಜೀವಿನಿ,
ಕಾಂತಿ ಬಿ. ಎಸ್, ಪಂಪ್ ಆಪರೇಟರ್ ಉಮೇಶ್, ಗ್ರಂಥಾಲಯ ಮೇಲ್ವಿಚಾರಕಿ ನಸೀಮಾ ಉಪಸ್ಥಿತರಿದ್ದರು. ಪಂಚಾಯತ್ ಅಬಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ವಂದಿಸಿದರು.