ಸುದ್ದಿ

ಮಂಗಳವಾರ – ದ.ಕ 279 , ಉಡುಪಿ 421 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಮಂಗಳವಾರ) ದ.ಕ ಜಿಲ್ಲೆಯಲ್ಲಿ 279 , ಉಡುಪಿ 421 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 279 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9301 ಕ್ಕೆ ಏರಿಕೆಯಾಗಿದೆ.ಇಂದು 9 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 286 ಕ್ಕೆ ಏರಿಕೆಯಾಗಿದೆ. ಇಂದು 173 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2188 ಸಕ್ರಿಯ ಪ್ರಕರಣಗಳಿವೆ. 279 ಪ್ರಕರಣಗಳ ಪೈಕಿ 163 ಪ್ರಕರಣಗಳು ಮಂಗಳೂರಿನಿಂದ, 49 ಪ್ರಕರಣಗಳು ಪುತ್ತೂರಿನಿಂದ, 25 ಪ್ರಕರಣಗಳು ಸುಳ್ಯದಿಂದ , ಹಾಗೂ 17 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು ದಾಖಲೆಯ 421 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8666 ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 321 ಮಂದಿ ಗುಣಮುಖರಾಗಿ ‌ ಡಿಸ್ಜಾರ್ಜ್ ಆಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ‌5951 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2637 ಸಕ್ರಿಯ ಪ್ರಕರಣಗಳಿವೆ.

Advertisement

Related Articles

Leave a Reply

Your email address will not be published. Required fields are marked *

Back to top button