ಸೋಮವಾರ – ದ.ಕ 18 ಹಾಗೂ ರಾಜ್ಯದಲ್ಲಿ 1963 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಸೋಮವಾರ ) ದ.ಕ ಜಿಲ್ಲೆಯಲ್ಲಿ 18 ಹಾಗೂ ರಾಜ್ಯದಲ್ಲಿ 1963 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು ಅತ್ಯಂತ ಕಡಿಮೆ ಅಂದರೆ 18 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 30915 ಕ್ಕೆ ಏರಿಕೆಯಾಗಿದೆ. ಇಂದು ಯಾರೂ ಕೂಡ ಕೊರೋನ ಸೋಂಕಿಗೆ ಬಲಿಯಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ ಕೊರೋನಾ ಸೋಂಕಿಗೆ ಒಟ್ಟು 688 ಮಂದಿ ಬಲಿಯಾಗಿದ್ದಾರೆ.ಇಂದು 155 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಇಂದು 1963 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು,ಇದರೊಂದಿಗೆ ಸೋಂಕಿತರ ಸಂಖ್ಯೆ 8,48,850ಕ್ಕೆ ಏರಿಕೆಯಾಗಿದೆ.ಇನ್ನು ರಾಜ್ಯದಲ್ಲಿ ಇಂದು 19 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11,410ಕ್ಕೆ ಏರಿಕೆಯಾಗಿದೆ. ಇಂದು 2,686 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 8,04,485ಕ್ಕೆ ಏರಿಕೆಯಾಗಿದೆ. 32,936 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Coro 1 240x300

Related Articles

Leave a Reply

Your email address will not be published. Required fields are marked *