ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ…
ಬಂಟ್ವಾಳ: ಭಜನೆಯಂತಹ ಉತ್ತಮ ಸಂಸ್ಕಾರ ಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದ ಅನಿವಾರ್ಯತೆ ಇದೆ ಎಂದು ಮಾಣಿ ಉಳ್ಳಾಲ್ತಿ ದೇವಸ್ಥಾನದ ಮೋಕ್ತೇಶರ ಸಚಿನ್ ರೈ ಮಾಣಿಗುತ್ತು ಹೇಳಿದರು.
ಅವರು ಪೆರಾಜೆ ಶ್ರೀದೇವಿ ಭಜನಾ ಮಂದಿರದಲ್ಲಿ ಅ.31 ರಿಂದ ನ.07 ರ ವರಗೆ ನಡೆದ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳು ಭಜನೆಯಂತಹ ಶಿಬಿರದಲ್ಲಿ ಭಾಗವಹಿಸಿದಾಗ ಬೌದ್ಧಿಕ ಶಕ್ತಿಯನ್ನು ವೃದ್ಧಿಸಲು ಸಹಾಯವಾಗುತ್ತದೆ. ಭಜನೆಯಿಂದ ವಿಭಜನೆಯಿಲ್ಲ ಎಂಬುದು ನಮ್ಮ ಹಿರಿಯರು ನಮಗೆ ಹೇಳಿದ್ದಾರೆ. ಭಜನೆಯ ಹಾಡುಗಳು ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಭಜನಾ ಶಿಕ್ಷಕ ಆಶ್ವತ್ ಬರಿಮಾರು ಮಾತನಾಡಿ ಪ್ರತಿಯೊಂದು ಮನೆಯಲ್ಲಿ ಭಜನೆ ನಡೆಯಬೇಕು. ದೇವರಿಗೆ ಭಜನೆಯ ಮೂಲಕ ಪೂಜೆ ಸಲ್ಲಿಸಿದಾಗ ಮನೆಯಲ್ಲಿ ಸಮೃದ್ದಿ ನೆಮ್ಮದಿ ಉಂಟಾಗುತ್ತದೆ.ಮನಸ್ಸಿನ ಒಳಗೆ ದೇವರಿದ್ದಾರೆ ಎಂಬ ಸತ್ಯವನ್ನು ಅರಿಯಲು ಭಜನೆ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಭಜನಾ ತರಬೇತಿಯನ್ನು ಮಕ್ಕಳಿಗೆ ನೀಡಿದ ಗಂಗಾದರ ಗೌಡ ಮಾಣಿ, ಅಶ್ವತ್ ಬರಿಮಾರು, ಪ್ರಶಾಂತ್ ಶಂಭೂರು, ಸಂದೀಪ್ ದರ್ಬಳಿಕೆ ಅವರನ್ನು ಗೌರವಿಸಲಾಯಿತು.
ವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಬುಡೋಳಿ ಗುತ್ತು, ಶ್ರೀದೇವಿ ಸೇವಾ ಟ್ರಸ್ಟ್ ಅಧಕ್ಷ ಮಾದವ ಪಾಳ್ಯ, ಪ್ರಮುಖರಾದ ಬಾಲಕೃಷ್ಣ ಮಿತ್ತಪೆರಾಜೆ, ನಾಗೇಶ್ ಕೊಂಕಣಪದವು ಮತ್ತಿತರರು ಉಪಸ್ಥಿತರಿದ್ದರು. ಭಜನಾ ಮಂಡಳಿಯ ಅಧ್ಯಕ್ಷ ಯತಿರಾಜ್ ಸ್ವಾಗತಿಸಿ ವಂದಿಸಿದರು.