ಸುಳ್ಯ ಗ್ರೀನ್ ವ್ಯೂ ಶಾಲೆಯಲ್ಲಿ ಲ್ಯಾಂಗ್ವೇಜ್ ಲ್ಯಾಬ್ (ಭಾಷಾ ಸಂವಹನ ಕೇಂದ್ರ) ಉದ್ಘಾಟನೆ, ಸ್ಪೋಕನ್ ಇಂಗ್ಲೀಷ್ ಕೋರ್ಸ್ ಪ್ರಾರಂಭ…
ಸುಳ್ಯ: ಸುಳ್ಯ ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯಲ್ಲಿ ಸ್ಪೋಕನ್ ಇಂಗ್ಲೀಷ್ ಕೋರ್ಸ್ಗೆ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಸಂಚಾಲಕ ಕೆ. ಎಂ. ಮುಸ್ತಫ ಮಾತನಾಡಿ ಗ್ರೀನ್ ವ್ಯೂ ಭಾಷಾ ಅಧ್ಯಯನ ಕೇಂದ್ರದ ಮೂಲಕ ಪ್ರಸ್ತುತ ವಿದ್ಯಾರ್ಥಿ ಗಳಿಗೆ ಸ್ಪೋಕನ್ ಇಂಗ್ಲೀಷ್ ಕೋರ್ಸ್ ಪ್ರಾರಂಭ ಗೊಳಿಸುತ್ತಿದ್ದೇವೆ. ಮುಂದೆ ಉರ್ದು ಮುಂತಾದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಭಾಷೆಗಳನ್ನು ಪರಿಚಯಿಸಲಾಗುತ್ತದೆ ಎಂದರು, ಪ್ರತಿಭಾ ಸಂಸ್ಥೆಯ ಭಾಷಾ ತಜ್ಞ, ತರಬೇತುದಾರ ವೆಂಕಟ್ರಮಣ ಭಟ್ ಮಾತನಾಡಿದರು.
ವೇದಿಕೆಯಲ್ಲಿ ಶಾಲಾ ಆಡಳಿತ ಸಮಿತಿ ಸಂಯೋಜಕ ಕೆ. ಎಸ್. ಉಮ್ಮರ್, ಮುಖ್ಯ ಶಿಕ್ಷಕ ಇಲ್ಯಾಸ್. ಕೆ. ಕಾಶಿಪಟ್ಣ, ಹಿರಿಯ ಶಿಕ್ಷಕಿ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ರಂಜಿತ್ ಸ್ವಾಗತಿಸಿ, ವಂದಿಸಿದರು.






