ದ.ಕ – ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕೊರೊನಾ ದೃಢ….

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಭಾನುವಾರ) ಎರಡು ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.

ಮಂಗಳೂರು ಜಪ್ಪಿನಮೊಗರು ನಿವಾಸಿಯಾಗಿರುವ 31 ವರ್ಷದ ಯುವಕನೋರ್ವನಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದ್ದು, ಈತನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಅನುಮಾನ ಬಂದು ಇವರು ಕೋವಿಡ್ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೆ ಒಳಗಾಗಿದ್ದರು.ಈ ಸೋಂಕಿನ ಮೂಲ ಪತ್ತೆ ಮಾಡಲಾಗುತ್ತಿದೆ.
ಮತ್ತೋರ್ವ ಸೋಂಕಿತೆ ಮಂಗಳೂರಿನ ಯಯ್ಯಾಡಿ ಮೂಲದ 35 ವರ್ಷದ ಮಹಿಳೆಯಾಗಿದ್ದು, ಈಕೆ ಮೇ 14ರಂದು ಮಹಾರಾಷ್ಟ್ರದಿಂದ ಬಂದಿದ್ದರು. ಇವರು ಮಹಿಳೆ, ಆಕೆಯ ಪತಿ ಮತ್ತು ಮಗು ಕ್ವಾರಂಟೈನ್ ನಲ್ಲಿದ್ದರು.
ಇಬ್ಬರನ್ನೂ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Related Articles

Back to top button