ಮಂಗಳೂರು: ದ.ಕ – ಶನಿವಾರ ಎಲ್ಲಾ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್…

ಮಂಗಳೂರು: ಶನಿವಾರದಂದು ಲಭ್ಯವಾದ ಎಲ್ಲಾ 167 ಮಂದಿಯ ಕೊರೊನಾ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದೆ.
ನಿನ್ನೆ ಜಿಲ್ಲೆಯಲ್ಲಿ 16 ಮಂದಿಯ ಕೊರೊನಾ ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿದ್ದವು. ನಿನ್ನೆ ಪಾಸಿಟಿವ್ ಬಂದ ವರದಿಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದವುಗಳೆಲ್ಲಾ ವಿದೇಶದಿಂದ ಬಂದವರದ್ದಾಗಿತ್ತು. ನಿನ್ನೆಯ ವರದಿಗಳಿಂದಾಗಿ ಆತಂಕಕ್ಕೊಳಗಾಗಿದ್ದ ಜಿಲ್ಲೆಯ ಜನತೆ ಇಂದಿನ ವರದಿಗಳಿಂದ ಸ್ವಲ್ಪ ನಿರಾಳರಾಗಿದ್ದಾರೆ.
ಇನ್ನು ಕರ್ನಾಟಕದಲ್ಲಿ ಇಂದು 36 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆ ಆಗಿದೆ. ಇನ್ನು ರಾಜ್ಯದಲ್ಲಿ ಒಟ್ಟಾರೆ 36 ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 559 ಸಕ್ರಿಯ ಸೋಂಕು ಪ್ರಕರಣಗಳಾಗಿದ್ದು, 496 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Related Articles

Back to top button