ಸುಳ್ಯ ಗಾಂಧಿನಗರ: ಮಹಾತ್ಮಾ ಗಾಂಧಿ ಆಟೋ ನಿಲ್ದಾಣ ಉದ್ಘಾಟನೆ…

ನಾಡಿನ ಅಭಿವೃದ್ಧಿಯಲ್ಲಿ ಜನಪ್ರತಿನಿಧಿ ಗಳೊಂದಿಗೆ ಸಾರ್ವಜನಿಕರು ಸಹಕರಿಸಿದಾಗ ಅನುದಾನಗಳ ಸದ್ಬಳಕೆ ಸಾಧ್ಯ: ಟಿ. ಎಂ ಶಹೀದ್...

ಸುಳ್ಯ: ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ ಯವರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ, ಸುಳ್ಯ ನಗರ ಪಂಚಾಯತ್ ಸಹಕಾರದೊಂದಿಗೆ ಸ್ಥಳೀಯ ಸದಸ್ಯ ಶರೀಫ್ ಕಂಠಿಯವರ ವಿಶೇಷ ಮುತುವರ್ಜಿಯಿಂದ ಸುಳ್ಯ ಗಾಂಧಿನಗರ ಗಾಂಧಿ ಪಾರ್ಕ್ ಬಳಿ ಆಧುನಿಕ ಶೈಲಿಯಲ್ಲಿ ನಿರ್ಮಿಸಿದ ಆಟೋ ರಿಕ್ಷಾ ತoಗುದಾಣವನ್ನು ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ. ಎಂ. ಶಹೀದ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ದ. ಕ. ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ವಹಿಸಿದ್ದರು.
ಉದ್ಘಾಟಿಸಿ ಮಾತನಾಡಿದ ಟಿ. ಎಂ ಶಹೀದ್ ರವರು ಜನಪ್ರತಿನಿಧಿಗಳ ಮೂಲಕ ನೀಡುವ ಸರ್ಕಾರದ ಅನುದಾನಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸದ್ಭಳಕೆಯಾದಾಗ ನಾಡಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ, ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ, ಸುಳ್ಯ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಮೀದ್ ಕುತ್ತಾಮೊಟ್ಟೆ, ಕೆಪಿಸಿಸಿ ನಿಕಟ ಪೂರ್ವ ಪ್ರದಾನ ಕಾರ್ಯದರ್ಶಿ ಧನಂಜಯ ಆಡ್ಪಂಗಾಯ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್. ಎ. ರಾಮಚಂದ್ರ, ಸಹಕಾರ ರತ್ನ ಪುರಸ್ಕೃತ ಪಿ. ಸಿ ಜಯರಾಮ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಜನತಾ, ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರು ಗಳಾದ ಕೆ. ಎಸ್. ಉಮ್ಮರ್, ಬಾಲಕೃಷ್ಣ ಭಟ್, ಧೀರ ಕ್ರಾಸ್ತ, ರಿಯಾಜ್ ಕಟ್ಟೆಕ್ಕಾರ್ಸ್, ಸಿದ್ದೀಕ್ ಕೊಕ್ಕೊ ಉದ್ಯಮಿ ಉಮ್ಮರ್ ಹಾಜಿ ಮೆಟ್ರೋ, ಎ ಪಿ ಎಂ ಸಿ ಕಾರ್ಯದರ್ಶಿ ರವೀಂದ್ರ, ಪಂಚಾಯತ್ ರಾಜ್ ಘಟಕ ಅಧ್ಯಕ್ಷ ಜಯಪ್ರಕಾಶ್ ಐವರ್ನಡು,ಪಿ ಎಸ್. ಗಂಗಾಧರ್, ಸುಮನಾ ಬೆಳ್ಳಾರ್ಕರ್, ಮಹೇಶ್ ಬೆಳ್ಳಾರ್ಕರ್, ಅಶೋಕ್ ಎಡಮಲೆ, ನಂದರಾಜ್ ಸಂಕೇಶ್, ಭವಾನಿ ಶಂಕರ್, ಬಿ. ಎಂ ಎಸ್ ರಿಕ್ಷಾ ಯೂನಿಯನ್ ಅಧ್ಯಕ್ಷ ಸುಬ್ರಮಣ್ಯ ಭಟ್, ಗಾಂಧಿನಗರ ಆಟೋ ಪಾರ್ಕ್ ಪದಾಧಿಕಾರಿಗಳಾದ ರಾಧಾಕೃಷ್ಣ ಪರಿವಾರಕಾನ ಮೊದಲಾದವರು ಉಪಸ್ಥಿತರಿದ್ದರು. ಶಶಿಧರ್ ಎಂ. ಜೆ. ಸ್ವಾಗತಿಸಿ, ಇಕ್ಬಾಲ್ ಸುಣ್ಣಮೂಲೆ ವಂದಿಸಿದರು.

whatsapp image 2026 01 06 at 4.40.39 pm

Related Articles

Back to top button