ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ “ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರ :ದೀಪ ಪೂಜನ ಕಾರ್ಯಕ್ರಮ….
ಬಂಟ್ವಾಳ : “ಉತ್ಥಾನ” ರಾಷ್ಟ್ರೀಯ ಸಂಸ್ಕಾರ ಬಾಲಿಕಾ ಶಿಬಿರದ ಅಂಗವಾಗಿ ಅ.3ರಂದು ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ ಸಾಮೂಹಿಕ ದೀಪ ಪೂಜನ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾದ ಶ್ರೀಮತಿ ಕಮಲಾ ಪ್ರಭಾಕರ್ ಭಟ್ ಹಾಗೂ ಶಿಬಿರಾಧಿಕಾರಿಯಾದ ನಿರ್ಮಲಾ ಚಾಲನೆಯನ್ನು ನೀಡಿದರು.
ನಮ್ಮದು ಮಾತೃ ಪ್ರಧಾನವಾದ ಸಮಾಜ. ಇಲ್ಲಿ ನಾವು ತಾಯಿಯನ್ನು ಪೂಜಿಸಬೇಕು. ಮನಸ್ಸಿಗೆ ಪ್ರೇರಣೆ ಕೊಡುವುದು ಬುದ್ಧಿ. ದೀಪಾರಾಧನೆಯಿಂದ ಮನೆಗೆ ಮತ್ತು ಸಮಾಜಕ್ಕೆ ನೀವು ಬೆಳಕಾಗಬೇಕು. ಬೆಳಕಿನಿಂದ ಸಾರ್ಥಕ ಜೀವನ ಸಾಧ್ಯ. ವಿದ್ಯೆ, ಬುದ್ಧಿ, ಜ್ಞಾನ, ವಿನಯ, ಸದ್ಗುಣಗಳನ್ನು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ನಮ್ಮೊಳಗಿನ ಅಜ್ಞಾನ ದೂರವಾಗಿ ಜ್ಞಾನದ ಜ್ಯೋತಿ ಬೆಳಗುವಂತಾಗಲಿ ಎಂದು ಪುರೋಹಿತರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ದೀಪ ಪೂಜನವನ್ನು ನೆರವೇರಿಸಿ, ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಸಂತ ಬಲ್ಲಾಳ್, ಶಿಶುಮಂದಿರದ ಮುಖ್ಯ ಮಾತಾಜಿ ಗಂಗಾ ಭಗಿನಿ ಉಪಸ್ಥಿತರಿದ್ದರು. ಶ್ರೀಮತಿ ಶೋಭಾ ವಂದಿಸಿ ಶ್ರೀಮತಿ ಚೈತನ್ಯ ಸ್ವಾಗತಿಸಿ, ನಿರೂಪಿಸಿದರು.