ಬಂಟ್ವಾಳ ತಾಲೂಕು ಅರ್ಚಕ ಮತ್ತು ಪುರೋಹಿತರ ಸಮಾಲೋಚನ ಸಭೆ…
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಇದರ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಅರ್ಚಕ ಮತ್ತು ಪುರೋಹಿತರ ಸಮಾನಮನಸ್ಕರ ಸಮಾಲೋಚನ ಸಭೆ ಬಿಸಿರೋಡ್ ನ ಬ್ರಾಹ್ಮಣ ಪರಿಷತ್ ಕಟ್ಟಡದಲ್ಲಿ ಆ.17 ರಂದು ನಡೆಯಿತು.
ಜಿಲ್ಲಾಧ್ಯಕ್ಷರಾದ ಪಿ ಕೃಷ್ಣರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ.ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ ಪೊಳಲಿ, ಬ್ರಾಹ್ಮಣ ಪರಿಷತ್ ಬಂಟ್ವಾಳ ಅಧ್ಯಕ್ಷ ನ್ಯಾಯವಾದಿ ರಮೇಶ್ ಉಪಾಧ್ಯಾಯ, ಜಿಲ್ಲಾ ಕಾರ್ಯದರ್ಶಿ ರಘು ಹೊಳ್ಳ, ಪ್ರಮುಖರಾದ ಶಿವಾನಂದ ಮಯ್ಯ, ಪದ್ಮನಾಭ ಕಾರಂತ ,ಪದ್ಮನಾಭ ಆಚಾರ್ ಪಿ ವೆಂಕಪ್ಪಯ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಡಿಮೆ ಆದಾಯ ಇರುವ ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು ಗಳಿಗೆ ಸರಕಾರದಿಂದ ಕೊರೋನಾ ಪರಿಹಾರದ ಬಗ್ಗೆ ಸಹಾಯಧನವನ್ನು ಒದಗಿಸಿಕೊಡುವಲ್ಲಿ ಸಂಘಟಿತ ಪ್ರಯತ್ನ ಮಾಡುವಂತೆ ಎನ್ ಸುಬ್ರಹ್ಮಣ್ಯ ಭಟ್ ಜಿಲ್ಲಾ ಹಾಗೂ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರುಗಳಲ್ಲಿ ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ಬಂಟ್ವಾಳ ತಾಲೂಕು ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರುಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ ಕೊಳ್ಳಲಾಗುವುದು ಎಂದು ತಿಳಿಸಲಾಯಿತು. ಪದಾಧಿಕಾರಿಗಳ ಆಯ್ಕೆ ಸರ್ವಾನುಮತದಿಂದ ನಡೆಸಲಾಯಿತು.