ಕವಿ, ಅನುವಾದಕ ಸುನೈಫ್ ಕನ್ನಡಕ್ಕೆ ಅನುವಾದಿಸಿರುವ ತಾಜ್‌ಮಹಲ್ಲಿನ ಖೈದಿಗಳು ಕಥಾಸಂಕಲನ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾoತರ…

ಸುಳ್ಯ: ಸುಳ್ಯದ ಪತ್ರಿಕಾ ರಂಗದಲ್ಲಿ ಉದ್ಯೋಗಿಯಾಗಿದ್ದ ಶಾಹಿನ ಅವರ ಪತಿ ವಿಟ್ಲ ಮೂಲದ ಸುನೈಫ್ ಕಲ್ಲಿಕೋಟೆಯಲ್ಲಿ ಉದ್ಯೋಗದಲ್ಲಿದ್ದಾರೆ. ಹಲವು, ಕಥೆ, ಕವನಗಳನ್ನು ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸಿರುವ ಸುನೈಫ್ ಇತ್ತೀಚೆಗೆ ಮಲಯಾಳಂ ಭಾಷೆಯ ಖ್ಯಾತ ಸಾಹಿತಿ ಶಿಹಾಬುದ್ದೀನ್ ಪೊಯ್ತುಂಕಡವು ಅವರ ಆಯ್ದ ಕತೆಗಳ “ತಾಜ್‌ಮಹಲ್ಲಿನ ಕೈದಿಗಳು” ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದು ಬೆಂಗಳೂರಿನಲ್ಲಿ ಹಿರಿಯ ಕವಿಯತ್ರಿ ಲಲಿತ ಸಿದ್ದಬಸವಯ್ಯ ಬಿಡುಗಡೆಗೊಳಿಸಿದ್ದರು.
ಸುಳ್ಯಕ್ಕೆ ಆಗಮಿಸಿದ ಸುನೈಫ್ ಸುಳ್ಯ ಗಾಂಧಿನಗರ ನಾವೂರು ಟಿ ಪಿ ಮಹಲ್ ನಲ್ಲಿ ತಾನು ಅನುವಾದಿಸಿದ ಪುಸ್ತಕಗಳ ಪ್ರತಿಗಳನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಜ್ ಕಟ್ಟೆಕ್ಕಾರ್ಸ್, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾಂಜಿ ಕೆಬಿ ಇಬ್ರಾಹಿಂ, ಸುಳ್ಯ ಕಾಂಟ್ರಾಕ್ಟ್ ದಾರರ ಸಂಘದ ಅಧ್ಯಕ್ಷ ಎಂ. ಕೆ. ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು. ಮಲೆಯಾಳo ಖ್ಯಾತ ಸಾಹಿತಿ ವೈಕo ಮಹಮ್ಮದ್ ಬಶೀರ್ ರವರ ಆಯ್ದ ಕಥೆಗಳ ಸಂಕಲನ “ಭೂಮಿಯ ಹಕ್ಕುದಾರರು” ಮತ್ತು “ಬಿಸಿಲ್ಗುದುರೆ ನೋವು” ಕವನ ಸಂಕಲನ ಸುನೈಫ್ ಅವರ ಪ್ರಕಟಿತ ಕೃತಿಗಳು.