ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಪದಾಧಿಕಾರಿಗಳಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಸನ್ಮಾನ…
ಮುಸ್ಲಿಂ ಸಮುದಾಯ ನೀಡುವ ಗೌರವ ಮತ್ತು ಆತಿಥ್ಯ ಎಂದೂ ಮರೆಯಲಾಗದು : ಅಶೋಕ್ ರೈ...

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಮಾವೇಶದಲ್ಲಿ ಶಾಸಕ ಅಶೋಕ್ ಕುಮಾರ್ ರೈಅವರನ್ನು ರಾಜ್ಯ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಮತ್ತು ಸಂಘಟನಾ ಕಾರ್ಯದರ್ಶಿ ನಝಿರ್ ಮಠ ಅವರು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ್ ಕುಮಾರ್ ರೈ ಯವರು ಮುಸ್ಲಿಂ ಸಮುದಾಯ ನೀಡುವ ಗೌರವ ಮತ್ತು ಆತಿಥ್ಯ ಯಾವತ್ತೂ ಮರೆಯುವುದು ಸಾಧ್ಯವಿಲ್ಲ. ಶಾಸಕರ ಬಳಿ ನಿಮ್ಮ ಕೆಲಸಕ್ಕೆ ಬರುವಾಗ ಸರಿಯಾದ ದಾಖಲೆ ಮತ್ತು ಪೇಪರ್ ವರ್ಕ್ ಮಾಡಿ ಬಂದರೆ ಸುಲಭದಲ್ಲಿ ಕೆಲಸ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ. ಬಿ. ವಿಶ್ವನಾಥ್ ರೈ, ಕೆಪಿಸಿಸಿ ಸಂಯೋಜಕ ನೂರುದ್ದೀನ್ ಸಾಲ್ಮರ, ಡಿಸಿಸಿ ವಕ್ತಾರ ಮಹಮ್ಮದ್ ಬಡಗನ್ನೂರ್, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ,ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗ ಅಧ್ಯಕ್ಷ ಶುಕೂರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.
