ಮೂಡುಬಿದ್ರೆ – ಗೌರೀ ದೇವಾಲಯದಲ್ಲಿ ಆ. 25 ರಂದು ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ…

ಮೂಡುಬಿದ್ರೆ: ಅತೀ ಪುರಾತನವಾದ ಸುಮಾರು 10ನೇ ಶತಮಾನದ ಹಾಗೂ ಮೂಡುಬಿದ್ರೆ ಆಸುಪಾಸಿನ ಎಲ್ಲ ಗ್ರಾಮಕ್ಕೂ ಗ್ರಾಮ ದೇವತೆಯಾಗಿರುವ ಗೌರೀ ದೇವಾಲಯದಲ್ಲಿ ಆ. 25 ರ ಶುಕ್ರವಾರ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ.
ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಂತರ 1 ರಿಂದ 2 ಗಂಟೆಯ ತನಕ ಅನ್ನ ಸಂತರ್ಪಣೆ ಸೇವೆ ನಡೆಯಲಿದೆ. ಸಾರ್ವಜನಿಕರು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಗೌರೀ ದೇವಸ್ಥಾನದ ಅನುವಂಶಿಕ ಅರ್ಚಕ ಹಾಗೂ ಆಡಳಿತ ಮೊಕ್ತೇಸರ ರಾಜೇಶ್ ಭಟ್ ಮೂಡುಬಿದ್ರೆ ವಿನಂತಿ ಮಾಡಿದ್ದಾರೆ.