ಯೆನೆಪೋಯ ಇಂಜಿನಿಯರಿಂಗ್ ಕಾಲೇಜು: ಯೆನ್ ಸಂಭ್ರಮ – 2021…
ಮೂಡುಬಿದ್ರಿ: ಇಲ್ಲಿನ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿವಿಧ ಕಾರ್ಯಕ್ರಮಗಳು “ಯೆನ್ ಸಂಭ್ರಮ – 2021 ” ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಿಮಿಕ್ರಿ ಕಲಾವಿದೆ ಮತ್ತು ಗಿನ್ನಿಸ್ ರೆಕಾರ್ಡ್ ನಾಮನಿರ್ದೇಶಿತ ಕಲಾವಿದೆ ಅಕ್ಷತಾ ಕುಡ್ಲ ಮಾತನಾಡಿ, ಇಂತಹ ಸ್ಪರ್ಧಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಮತ್ತು ಕ್ರಿಯಾಶೀಲತೆಗೆ ವೇದಿಕೆಯಾಗುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜಾ ಅವರು ದೇವರು ನೀಡುವ ಕೊಡುಗೆಯಾದ ಪ್ರತಿಭೆಯನ್ನು ಪ್ರದರ್ಶಿದರೆ ಅದು ಬೆಳೆಯುತ್ತದೆ, ಇಲ್ಲವಾದರೆ ನಶಿಸುತ್ತದೆ. ಪ್ರತಿಭೆಯನ್ನು ಪ್ರದರ್ಶಿಸುವುದರಿಂದ ಎಲ್ಲ ರೀತಿಯ ಅಸಮಾನತೆಯನ್ನು ತೊಡೆದು ಹಾಕಲು ಸಾಧ್ಯ. ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ಅಸಮಾನತೆಯನ್ನು ತೊಡೆದು ಹಾಕಬೇಕು ಎಂದರು.
ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಪ್ರೊ. ದೀಕ್ಷಾ ಕೆ. ಆರ್. ಉಪಸ್ಥಿತರಿದ್ದರು. ಪ್ರೊ. ದೀಕ್ಷಾ ಕೆ. ಆರ್. ಸ್ವಾಗತಿಸಿದರು. ವಿದ್ಯಾರ್ಥಿನಿ ನಿಕತ್ ಮತ್ತು ತಂಡದವರು ಪ್ರಾರ್ಥಿಸಿದರು. ಪ್ರತೀಕ್ಷಾ ಶೆಟ್ಟಿ ಅತಿಥಿ ಪರಿಚಯ ಮಾಡಿದರು. ಇಯಾನ್ ಶೇಕ್ ವಂದಿಸಿದರು. ಶ್ರೀನಿಧಿ ಆರ್. ಪೈ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹಾಡುಗಾರಿಕೆ, ರಸಪ್ರಶ್ನೆ, ಮ್ಯಾಡ್ ಆಡ್ಸ್, ಗ್ರೂಪ್ ಡಾನ್ಸ್, ಪೆನ್ಸಿಲ್ ಸ್ಕೆಚ್, ಫೋಟೋಗ್ರಫಿ, ಫೇಸ್ ಪೇಂಟಿಂಗ್ ಮೊದಲಾದ 10 ಕ್ಕೂ ಅಧಿಕ ವಿಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.