ಬಿ.ಸಿ.ರೋಡಿನಲ್ಲಿ ಎಕ್ಸಿಬಿಷನ್ ಇಂಡಿಯಾ ಪ್ರದರ್ಶನ ಮೇಳ…..

ಬಂಟ್ವಾಳ : ಬಿ.ಸಿ.ರೋಡಿನಲ್ಲಿ ರೋಬಾಟಿಕ್ ಕಾಡು ಪ್ರಾಣಿಗಳ ಪ್ರದರ್ಶನ ಮತ್ತು ವಿವಿಧ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನೊಳಗೊಂಡ ಎಕ್ಸಿಬಿಷನ್ ಇಂಡಿಯಾ ಪ್ರದರ್ಶನ ಮೇಳವನ್ನು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಉದ್ಘಾಟಿಸಿ ಶುಭ ಹಾರೈಸಿದರು.
ಬಿ.ಸಿ.ರೋಡಿನ ಉದ್ಯಾನವನದ ಹತ್ತಿರವಿರುವ ಗೋಲ್ಡನ್ ಪಾರ್ಕ್ನಲ್ಲಿ ಎಕ್ಸಿಬಿಷನ್ ಇಂಡಿಯಾ ಸಂಯೋಜಕತ್ವದಲ್ಲಿ ಅ.30 ರಿಂದ ಡಿ.7 ರವರೆಗೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರಿಗಾಗಿ ಶಾಫಿಂಗ್ ,ಫನ್ ಎಂಟರ್‌ಟೈನ್‌ಮೆಂಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಯೋಜಕರಾದ ಎಮ್.ಎಸ್.ನಾಗಚಂದ್ರ ಬೆಂಗಳೂರು ತಿಳಿಸಿದರು.
ಬಿ.ಸಿ.ರೋಡಿನಲ್ಲಿ ಪ್ರಥಮ ಬಾರಿಗೆ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು ಮನೆಗೆ ಬೇಕಾದ ವಸ್ತುಗಳ ಶಾಪಿಂಗ್ ವ್ಯವಸ್ಥೆ , ಮನರಂಜನೆ, 20ಕ್ಕೂ ಅಧಿಕ ಆಟದ ಜಾಯಿಂಟ್ ವೀಲ್‌ಗಳು , ಫುಡ್ ಕೊರ್ಟ್ ,ಗಿಲಿಗಿಲಿ ಮ್ಯಾಜಿಕ್ ಇವುಗಳನ್ನು ಜೋಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶೇ.50 ರಿಯಾಯಿತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಬಂಟ್ವಾಳ ತಾಲೂಕು ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಅಶೋಕ್ ಬರಿಮಾರು, ಸಾಮಾಜಿಕ ಕಾರ್ಯಕರ್ತ ಎಮ್. ಎಸ್. ಇಸ್ಮಾಯಿಲ್, ಎಮ್. ಸುಬ್ಬ ರಾವ್ , ಎಸ್.ಕೆ. ಪಾಟೀಲ್ , ಮಹಮ್ಮ್ ಕಬೀರ್, ಎಸ್ ಶಿವಕುಮಾರ್ ಉಪಸ್ಥಿರಿದ್ದು ಪ್ರದರ್ಶನದ ವಿವರಗಳನ್ನು ನೀಡಿದರು.

Sponsors

Related Articles

Leave a Reply

Your email address will not be published. Required fields are marked *

Back to top button