ಪ್ರೊ.ಅಮೃತ ಸೋಮೇಶ್ವರರಿಗೆ 2020ರ ಡಾ.ಶಿವರಾಮ ಕಾರಂತ ಬಾಲವನ ಪ್ರಶಸ್ತಿ…
ಪುತ್ತೂರು: ಹಿರಿಯ ಸಾಹಿತಿ, ಸಂಶೋಧಕ, ಪ್ರಸಂಗಕರ್ತ ಪ್ರೊ.ಅಮೃತ ಸೋಮೇಶ್ವರರವರು 2020ನೇ ಸಾಲಿನ ಡಾ.ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಇದೇ ಅಕ್ಟೋಬರ್ 10ರಂದು ಅಪರಾಹ್ನ ಬಾಲವನದಲ್ಲಿ ನಡೆಯುವ ಡಾ.ಶಿವರಾಮ ಕಾರಂತರ ಜನ್ಮ ದಿನಾಚರಣೆಯಂದು ಈ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರೊ. ಸೋಮೇಶ್ವರರವರಿಗೆ ನೀಡಿ ಗೌರವಿಸಲಾಗುವುದು.ಪ್ರಶಸ್ತಿಯು 25 ಸಾವಿರ ನಗದು, ಫಲಕ, ಪ್ರಮಾಣ ಪತ್ರ, ಶಾಲು, ಹಾರ ಒಳಗೊಂಡಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ಬಾಲವನದ ಆಡಳಿತಾಧಿಕಾರಿ ಡಾ.ಸುಂದರ ಕೇನಾಜೆ ಉಪಸ್ಥಿತರಿದ್ದರು.
ಸುಳ್ಯದ ಕುರುಂಜಿ ವೆಂಕಟ್ರಮಣ ಗೌಡ ದತ್ತಿನಿಧಿ ಮೂಲಕ ಬಾಲವನವು ಕಾರಂತರ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡುತ್ತಿದೆ.