ಸುಳ್ಯ ನಗರದಲ್ಲಿ ರಸ್ತೆ ದುರವಸ್ಥೆ- ಸರಿಪಡಿಸಲು ಒತ್ತಾಯ…

ಸುಳ್ಯ: ಸುಳ್ಯ ನಗರದಲ್ಲಿ ಕುಡಿಯುವ ನೀರಿನ ಕಾಮಗಾರಿಯಿಂದ ಜನರಿಗೆ ಉಂಟಾದ ಸಮಸ್ಯೆ ಯ ಬಗ್ಗೆ ವೀಕ್ಷಣೆ ಮಾಡಿದ ನಾಯಕರುಗಳು ನಗರ ಪಂಚಾಯತ್ ಮುಖ್ಯಾಧಿಕಾರಿ, ಇಂಜಿನಿಯರ್, ಗುತ್ತಿಗೆದಾರರೊಂದಿಗೆ ಮಾತನಾಡಿ ದಿನಕ್ಕೆ 2 ಬಾರಿ ನೀರು ಹಾಕುವುದರೊಂದಿಗೆ ತಕ್ಷಣ ರಸ್ತೆಯನ್ನು ಯಥಾಸ್ಥಿತಿಗೆ ದುರಸ್ತಿ ಮಾಡಬೇಕು ಎಂದು ತಾಕೀತು ಮಾಡಿದರು.
ಸ್ಥಳೀಯ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸದಸ್ಯ ಕೆ. ಎಂ. ಮುಸ್ತಫ, ಸದಸ್ಯರುಗಳಾದ ರಿಯಾಜ್ ಕಟ್ಟೆಕ್ಕಾರ್ಸ್, ಧೀರ ಕ್ರಾಸ್ತ, ನಾಮ ನಿರ್ದೇಶಿತ ಸದಸ್ಯ ಸಿದ್ದೀಕ್ ಕೊಕ್ಕೋ, ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಪಿ. ಎಸ್. ಗಂಗಾಧರ್, ಕುಮಾರ್ ಕೆಎಫ್ ಡಿಸಿ, ಅರೋಗ್ಯ ರಕ್ಷಾ ಸಮಿತಿ ಸದಸ್ಯ ಶಹೀದ್ ಪಾರೆ ಮೊದಲಾದವರು ಜತೆಗಿದ್ದರು.