ಎಸ್ ಎಸ್ ಎಫ್ ಗಾಂಧಿನಗರ ಶಾಖೆಗೆ ಟಿ ಎಂ ಶಹೀದ್ ತೆಕ್ಕಿಲ್ ರವರಿಂದ ವೀಲ್ ಚಯರ್ ಕೊಡುಗೆ…

ಸುಳ್ಯ: ಎಸ್ ಎಸ್ ಎಫ್ ಗಾಂಧಿನಗರ ಶಾಖೆಗೆ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು, ಸುಳ್ಯ ಇದರ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ರವರು ವೀಲ್ ಚಯರ್ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಎಸ್ ವೈ ಎಸ್ ನಾಯಕರಾದ ಸಿದ್ದೀಕ್ ಕಟ್ಟೆಕಾರ್ಸ್, ಎಸ್ ವೈ ಎಸ್ ಸುಳ್ಯ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಿ ಎ, ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಕಾರ್ಯದರ್ಶಿ ನೌಶಾದ್ ಕೆರೆಮೂಲೆ, ಸುಳ್ಯ ಸೆಕ್ಟರ್ ಅಧ್ಯಕ್ಷ ಸಿದ್ದೀಕ್ ಬಿ ಎ, ಗಾಂಧಿನಗರ ಶಾಖಾಧ್ಯಕ್ಷರಾದ ಅಬ್ದುಲ್ ರಶೀದ್ ಝೈನಿ, ಗೂನಡ್ಕ ಶಾಖಾಧ್ಯಕ್ಷರಾದ ಜಾಬಿರ್ ಎಂ ಬಿ, ಗೂನಡ್ಕ ಶಾಖಾ ಮಾಜಿ ಅಧ್ಯಕ್ಷರಾದ ಹಾರಿಸ್ ಝಮ್ ಝಮ್, ಗಾಂಧಿನಗರ ಶಾಖಾ ಪ್ರಧಾನ ಕಾರ್ಯದರ್ಶಿ ಸಿಯಾದ್ ಜಯನಗರ ಉಪಸ್ಥಿತರಿದ್ದರು.